ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರಿಗೆ ಲಭಿಸಿತು ಚಿಕಿತ್ಸೆ... ಈಟಿವಿ ಭಾರತ​ ಫಲಶೃತಿ - tumakuru latest news

ಲಾಕ್​ಡೌನ್ ಹಿನ್ನೆಲೆ ವಲಸೆ ಕಾರ್ಮಿಕರಿಗೆ ಚಿಕಿತ್ಸೆ ದೊರೆಯದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವಿಚಾರ ಈಟಿವಿ ಭಾರತ್​ನಲ್ಲಿ ವರದಿಯಾದ ನಂತರ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದ್ದಾರೆ.

treatment for wage workers in Tumakur
ಈಟಿವಿ ಭಾರತ​ ಫಲಶೃತಿ....ವಲಸೆ ಕಾರ್ಮಿಕರಿಗೆ ಲಭಿಸಿತು ಚಿಕಿತ್ಸೆ

By

Published : Apr 24, 2020, 3:01 PM IST

ತುಮಕೂರು: ಲಾಕ್​ಡೌನ್​​ನಿಂದ ಸಿಲುಕಿರೋ ಅನ್ಯ ರಾಜ್ಯದ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಕೊರಟಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಈಟಿವಿ ಭಾರತದ ಸುದ್ದಿಗೆ ಸ್ಪಂದಿಸಿರುವ ಜಿಲ್ಲಾಡಳಿತ, ಕಾರ್ಮಿಕರು ಇದ್ದ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ.

ಈಟಿವಿ ಭಾರತ​ ಫಲಶೃತಿ.... ವಲಸೆ ಕಾರ್ಮಿಕರಿಗೆ ಲಭಿಸಿತು ಚಿಕಿತ್ಸೆ

ಹೊರ ರಾಜ್ಯದ ಕಾರ್ಮಿಕರಿಗೆ ಮರೀಚಿಕೆಯಾದ ಚಿಕಿತ್ಸೆ..!

ಕೊರಟಗೆರೆ ಹೊರವಲಯದ ಎತ್ತಿನಹೊಳೆ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ಬಿಹಾರ, ಉತ್ತರ ಪ್ರದೇಶದಿಂದ ಕಾರ್ಮಿಕರು ಆಗಮಿಸಿದ್ದರು. ಲಾಕ್​ಡೌನ್ ಹಿನ್ನೆಲೆ ಚಿಕಿತ್ಸೆ ದೊರೆಯದ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಾರ್ಮಿಕರ ಈ ಸಂಕಷ್ಟ ಕುರಿತು ಈಟಿವಿ ಭಾರತ್​ನಲ್ಲಿ ವಿಸ್ತೃತ ವರದಿಯಾದ ನಂತರ ಎಚ್ಚೆತ್ತುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಈಟಿವಿ ಭಾರತ ವರದಿಗೆ ಸ್ಪಂದಿಸಿ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಮುಂದಾಗಿರುವ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಧನ್ಯವಾದ ತಿಳಿಸುತ್ತೇವೆ.

ABOUT THE AUTHOR

...view details