ಕರ್ನಾಟಕ

karnataka

ETV Bharat / state

ತುಮಕೂರು : ಶಿರಾ ನಗರಸಭೆ ಪ್ರವೇಶಿಸಿದ ಒಂದೇ ಮನೆಯ ಮೂವರು ಸೊಸೆಯರು - ಮಾಜಿ ಶಿರಾ ಪುರಸಭಾ ಅಧ್ಯಕ್ಷ ಖಾನ್​​ಸಾಬ್

ಬಾಣಂತಿಯಾಗಿದ್ದ ಸ್ವಾತಿ ಚುನಾವಣಾ ಪ್ರಚಾರದಲ್ಲಿ ತಮ್ಮ ಪತಿಯೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದರು. 15 ದಿನದ ಮಗುವನ್ನು ಆರೈಕೆ ಮಾಡುವ ಜೊತೆಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇವರ ಎದುರಾಳಿ ಕಾಂಗ್ರೆಸ್​ನ ಸುಶೀಲ ವಿರೂಪಾಕ್ಷ ಸೋಲುಂಡಿದ್ದಾರೆ..

three-of-the-same-households-entered-the-shira-municipality
ಶಿರಾ ನಗರಸಭೆ ಪ್ರವೇಶಿಸಿದ ಒಂದೇ ಮನೆಯ ಮೂವರು ಸೊಸೆಯರು

By

Published : Dec 31, 2021, 8:29 PM IST

ತುಮಕೂರು :ಶಿರಾ ನಗರಸಭೆಗೆ ಈ ಬಾರಿ ಒಂದೇ ಮನೆಯ ಮೂವರು ವಾರಗಿತ್ತಿಯರು ಪ್ರವೇಶಿಸಿದ್ದಾರೆ. ಇವರುಗಳು ಮಾಜಿ ಶಿರಾ ಪುರಸಭಾ ಅಧ್ಯಕ್ಷ ಖಾನ್​​ಸಾಬ್ ಅವರ ಸೊಸೆಯರು ಎಂದು ತಿಳಿದು ಬಂದಿದೆ.

ವಾರ್ಡ್​ ನಂಬರ್ 20ರಲ್ಲಿ ರೆಹಾನ್ ಖಾನ್, ವಾರ್ಡ್ ನಂಬರ್ 19ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರುಖೈಯಾ ಪರ್ವಿನ್, ವಾರ್ಡ್ ನಂಬರ್ 24ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸಮರಿನ್ ಖಾನ್ ಆಯ್ಕೆಯಾಗಿರುವವರು.

ಇನ್ನೊಂದೆಡೆ ಶಿರಾ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಾಣಂತಿ ಸ್ವಾತಿ ಮಂಜೇಶ 80 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 30ನೇ ವಾರ್ಡ್​ನಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಕಣದಲ್ಲಿದ್ದರು.

ಬಾಣಂತಿಯಾಗಿದ್ದ ಸ್ವಾತಿ ಚುನಾವಣಾ ಪ್ರಚಾರದಲ್ಲಿ ತಮ್ಮ ಪತಿಯೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದರು. 15 ದಿನದ ಮಗುವನ್ನು ಆರೈಕೆ ಮಾಡುವ ಜೊತೆಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇವರ ಎದುರಾಳಿ ಕಾಂಗ್ರೆಸ್​ನ ಸುಶೀಲ ವಿರೂಪಾಕ್ಷ ಸೋಲುಂಡಿದ್ದಾರೆ.

ಓದಿ:ರಾಜ್ಯದಲ್ಲಿ ಒಮಿಕ್ರಾನ್​ ಅಬ್ಬರ.. 23 ಹೊಸ ಸೋಂಕಿತರು ಪತ್ತೆ..

ABOUT THE AUTHOR

...view details