ತುಮಕೂರು: ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಒಂದು ಚಾನಲ್ ಬಿಟ್ರೆ ಉಳಿದೆಲ್ಲಾ ಚಾನಲ್ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾ ಹೇಳ್ತಾ ಇದ್ರು. ನಮಗೆ 50-60 ಸೀಟ್ ಬರುತ್ತೆ ಅಂತಾ ಹೇಳ್ತಾ ಇದ್ರು. ಒಂದು ಚಾನಲ್ ಮಾತ್ರ 135 ಸೀಟ್ ಅಂತಾ ಹೇಳ್ತಾ ಇತ್ತು. ಕೆಲವು ಬಾರಿ ಸಮೀಕ್ಷೆ ಉಲ್ಟಾ ಆಗುತ್ತೆ. ಕೆಲವೊಮ್ಮೆ ಸಕ್ಸಸ್ ಆಗುತ್ತೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.
ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯನ್ನು ನಾವು ರಿಸಲ್ಟ್ ಅಂತಾ ಹೇಳೋದಿಲ್ಲ. ಸಮೀಕ್ಷೆಯನ್ನು ಸಮಿಕ್ಷೆಯಾಗಿಯೇ ನೋಡಬೇಕು. ಇಂಡಿಯಾ (INDIA) ಕೇಂದ್ರದಲ್ಲಿ ಮುಂದಿನ ಬಾರಿ ಅಧಿಕಾರ ಹಿಡಿಯುವ ಬಗ್ಗೆ ನನಗೆ ವಿಶ್ವಾಸ ಇದೆ ಎಂದು ಹೇಳಿದರು.
ಈ ಬಾರಿ ಜನ ಬದಲಾವಣೆ ಬಯಸುತ್ತಾರೆ : 10 ವರ್ಷ ಆಗಿದೆ. ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಮನಮೋಹನ್ ಸಿಂಗ್ ಇದ್ದಾಗ ಹತ್ತು ವರ್ಷ ಆಗಿತ್ತು. ಆಗ ಜನ ಬದಲಾವಣೆ ಬಯಸಿದ್ರು. ಆಗ ನರೇಂದ್ರ ಮೋದಿ ಅವರಿಗೆ ಅವಕಾಶ ಕೊಟ್ಟಿದ್ರು. ಈ ಬಾರಿ ಜನ ಬದಲಾವಣೆ ಬಯಸುತ್ತಾರೆ ಅಂತಾ ಅಂದುಕೊಂಡಿದ್ದೇನೆ ಎಂದರು.
ಇದನ್ನೂ ಓದಿ:G.Parameshwar: ಸತ್ಯಾಂಶ ನೋಡಿ ಕಾನೂನಾತ್ಮಕ ಅವಕಾಶಗಳಿದ್ದರೆ ಕೇಸ್ ವಾಪಸ್: ಜಿ.ಪರಮೇಶ್ವರ್
ಭಾರತ ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿ ಎಲ್ಲಾ ಕ್ಷೇತ್ರದಲ್ಲಿ ಬೆಳೆಯುತ್ತಿದೆ. ಅವರು ಇರುವಾಗಲೂ ಒಂದಷ್ಟು ಮಾಡಿದ್ದಾರೆ. ಇಲ್ಲ ಅಂತಾ ಹೇಳಲ್ಲ. ಆದರೆ ಅಡಿಪಾಯ ಯಾರದ್ದು? ಅಡಿಪಾಯ ಹಾಕಿದವರು ಇದ್ದಾರಲ್ಲಾ ಎಂದರು. ಎಲ್ಲರ ಉದ್ದೇಶ ಒಂದೇ, ಭಾರತ ಬೆಳೆಯಬೇಕು, ಬಲಿಷ್ಠ ರಾಷ್ಟ್ರ ಆಗಬೇಕು. ಅದಕ್ಕೆ ನಾನು, ನೀವು, ಎಲ್ಲಾರು ಷೇರು ತಗೋಬಹುದು ಎಂದರು.
ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ: ಶಕ್ತಿ ಯೋಜನೆ ವಿರುದ್ದ ಆಟೋ ಚಾಲಕರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಮಹಿಳೆಯರಿಗೆ ಸಹಾಯವಾಗಲು ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ. ಆಟೋದವರನ್ನು ಉದ್ದೇಶ ಇಟ್ಟುಕೊಂಡು ಮಾಡಿಲ್ಲ. ಅವರ ಕಷ್ಟ ಏನಿದೆಯೋ ಕೇಳಿಕೊಂಡು, ಅದನ್ನು ಬಗೆಹರಿಸೋಣ ಎಂದು ಹೇಳಿದರು.
ಇದನ್ನೂ ಓದಿ:G.Parameshwar: ಸತ್ಯಾಂಶ ನೋಡಿ ಕಾನೂನಾತ್ಮಕ ಅವಕಾಶಗಳಿದ್ದರೆ ಕೇಸ್ ವಾಪಸ್: ಜಿ.ಪರಮೇಶ್ವರ್
ಕ್ಷಮೆ ಕೇಳಿ ಅಂತಾ ಯಾರೂ ಹೇಳಿಲ್ಲ: ಬಿ ಆರ್ ಪಾಟೀಲ್ ರಾಜೀನಾಮೆ ಹೇಳಿಕೆ ವಿಚಾರ, ರಾಜೀನಾಮೆ ಯಾರು ಕೊಡಬೇಕಾಗಿಲ್ಲ. ಕ್ಷಮೆ ಕೇಳಿ ಅಂತಾನೂ ಯಾರೂ ಹೇಳಿಲ್ಲ. ಬೇರೆ ಉದ್ದೇಶಕ್ಕೆ ನಾವು ಈ ರೀತಿ ಮಾಡಿಲ್ಲ ಅಂತಾ ಹೇಳಿದ್ದಾರೆ ಬಿಟ್ರೆ, ಅದಕ್ಕೆ ಯಾರೂ ಕ್ಷಮೆ ಕೇಳಬೇಕಾಗಿಲ್ಲ ಎಂದರು. ಸಭೆ ಕರಿರಿ ಅಂತಾ ಹೇಳೋದು ಶಾಸಕರ ಹಕ್ಕು. ಯಾವ ಪಕ್ಷದಲ್ಲಾಗಿರಬಹುದು ಸಭೆ ಕರೀರಿ ಅಂದಾಗ ನಾಯಕರು ಬನ್ನಿ ಅಂತಾ ಹೇಳ್ತಾರೆ. ಅದನ್ನು ಬೇರೆ ರೀತಿ ಅರ್ಥೈಸೋದು ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಸಿಎಲ್ಪಿ ಸಭೆಯಲ್ಲಿ ಶಾಸಕರು ಯಾವುದೇ ಅಸಮಾಧಾನ ಹೊರಹಾಕಿಲ್ಲ:ಜಿ ಪರಮೇಶ್ವರ್