ತುಮಕೂರು: ವಾಹನ ಖರೀದಿಸಲು ಬಂದ ವ್ಯಕ್ತಿ ಧರಿಸಿರುವ ಬಟ್ಟೆ ನೋಡಿ ಕಾರು ಶೋ ರೂಮ್ ಸಿಬ್ಬಂದಿ ಹಿಯಾಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಅಪಮಾನಗೊಂಡ ಗ್ರಾಹಕ, ಒಂದು ಗಂಟೆ ಅವಧಿಯಲ್ಲಿ ಬರೋಬ್ಬರಿ ₹10 ಲಕ್ಷ ಹೊಂದಿಸಿ ಕಾರು ಡೆಲಿವರಿ ಕೊಡುವಂತೆ ಪಟ್ಟು ಹಿಡಿದಿದ್ದ ಘಟನೆ ನಗರದಲ್ಲಿ ನಡೆದಿದೆ.
ನಡೆದಿದ್ದೇನು? ತಾಲೂಕಿನ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಕೆಂಪೇಗೌಡ ಎಂಬ ವ್ಯಕ್ತಿ ವಾಹನ ಖರೀದಿಸಲು ತುಮಕೂರು ನಗರದಲ್ಲಿರುವ ಕಾರು ಶೋ ರೂಮ್ ತೆರಳಿದ್ದರು. ಈ ವೇಳೆ ಗ್ರಾಹಕ ಧರಿಸಿದ್ದ ಬಟ್ಟೆ ಕಂಡು ಶೋ ರೂಮ್ ಸಿಬ್ಬಂದಿ ಹತ್ತು ರೂಪಾಯಿ ಕೊಡುವ ಯೋಗ್ಯತೆ ಇಲ್ಲ. ವಾಹನ ತೆಗೆದುಕೊಳ್ಳಲು ಬಂಂದಿದೆಯಾ ಎಂದು ತನಗೆ ಹಿಯಾಳಿಸಿದ್ದಾರೆ ಎಂದು ಗ್ರಾಹಕ ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಂದು 42,470 ಜನರಿಗೆ ಕೊರೊನಾ ಪಾಸಿಟಿವ್.. 35 ಸಾವಿರಕ್ಕೂ ಹೆಚ್ಚು ಮಂದಿ ಚೇತರಿಕೆ