ತುಮಕೂರು: ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಯಾವುದೇ ಅಧಿಕಾರದ ಆಸೆಗಾಗಿ ರಾಜೀನಾಮೆ ಕೊಟ್ಟವರಲ್ಲ, ಅವರ ವ್ಯಕ್ತಿತ್ವ ಹಾಗಿಲ್ಲ ರಾಜ್ಯ ಸರ್ಕಾರ ಉರುಳುತ್ತದೆ ಎಂಬುದು ಸುಳ್ಳು ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ತಿಳಿಸಿದರು.
ರಾಮಲಿಂಗಾರೆಡ್ಡಿ ಪಕ್ಷಕ್ಕೆ ಹಾನಿ ಮಾಡುವ ಆಲೋಚನೆ ಮಾಡಲ್ಲ: ಸಚಿವ ಖಾದರ್ - harm
ರಾಮಲಿಂಗಾರೆಡ್ಡಿ ಅವರು ನಮ್ಮ ಹಿರಿಯ ನಾಯಕರು ಪಕ್ಷಕ್ಕೆ ಹಾನಿಯುಂಟು ಮಾಡುವ ಆಲೋಚನೆ ಮಾಡುವುದಿಲ್ಲ ಎಂದು ತುಮಕೂರಿನಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ರಾಮಲಿಂಗಾರೆಡ್ಡಿಯವರು ಪಕ್ಷಕ್ಕೆ ಹಾನಿಯಾಗುವ ಆಲೋಚನೆ ಮಾಡುವುದಿಲ್ಲ
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿd ಅವರು, ರಾಮಲಿಂಗಾರೆಡ್ಡಿ ರಾಜೀನಾಮೆ ವಿಚಾರ ಕೇವಲ ವದಂತಿ. ರಾಮಲಿಂಗಾರೆಡ್ಡಿ ಅವರು ನಮ್ಮ ಹಿರಿಯ ನಾಯಕರು ಪಕ್ಷಕ್ಕೆ ಹಾನಿಯುಂಟು ಮಾಡುವ ಆಲೋಚನೆ ಮಾಡುವುದಿಲ್ಲ. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರ ಬಗ್ಗೆ ನಂಬಿಕೆ ಹಾಗೂ ಆತ್ಮವಿಶ್ವಾಸವಿದೆ ಎಂದ್ರು.
ರಾಜೀನಾಮೆ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಅವರದು ಅಧಿಕಾರಕ್ಕೆ ಆಸೆ ಪಡುವ ವ್ಯಕ್ತಿತ್ವವಲ್ಲ. ಏನಾದರೂ ವಿಚಾರ ಇದ್ದರೆ ನಮ್ಮ ರಾಷ್ಟ್ರ ಹಾಗೂ ರಾಜ್ಯದ ನಾಯಕರ ಜೊತೆ ಮಾತನಾಡುತ್ತಾರೆ ಎಂದರು.
Last Updated : Jul 6, 2019, 6:12 PM IST