ಕರ್ನಾಟಕ

karnataka

By

Published : Apr 25, 2020, 8:16 PM IST

ETV Bharat / state

ಕುಡಿವ ನೀರಿಗಾಗಿ ಪಕ್ಕದ ಗ್ರಾಮಕ್ಕೆ ಹೋಗಿ ಅವಮಾನ: ಪಾವಗಡದ ಗ್ರಾಮಸ್ಥರ ಆಕ್ರೋಶ

ಕೊಡಮೊಡಗು ಗ್ರಾಮದಲ್ಲಿ ಜನರಿಗೆ ಕುಡಿವ ನೀರಿನ ಸಮಸ್ಯೆಯಿದ್ದು, ನೀರಿಗಾಗಿ ಗ್ರಾಮಸ್ಥರು ಸಮೀಪದ ಆಂಧ್ರದ ಆರ್.ಕೊಟ್ಟಾಲ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ, ಅಲ್ಲಿನ ಗ್ರಾಮಸ್ಥರು ಹೀನಾಮಾನವಾಗಿ ಬೈದು ದಂಡ ವಿಧಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

Pavagada village people facing drinking water problem
ಕುಡಿಯುವ ನೀರಿಗಾಗಿ ಪಕ್ಕದ ಗ್ರಾಮಕ್ಕೆ ಹೋಗಿ ಅವಮಾನ ಮಾಡಿಸಿಕೊಂಡ ಬಂದ ಪಾವಗಡ ಗ್ರಾಮಸ್ಥರು

ಪಾವಗಡ :ಕುಡಿವ ನೀರಿಗಾಗಿ ಪಕ್ಕದ ಆಂಧ್ರಪ್ರದೇಶದ ಆರ್.ಕೊಟ್ಟಾಲ ಗ್ರಾಮಕ್ಕೆ ತೆರಳಿ ಅಲ್ಲಿನ ಜನರಿಂದ ಅವಮಾನ ಮಾಡಿಸಿಕೊಂಡು ದಂಡ ಕಟ್ಟಿ ಬಂದಂತಹ ಘಟನೆ ತಾಲೂಕಿನ ಕೊಡ ಮೊಡಗು ಗ್ರಾಮದಲ್ಲಿ ನಡೆದಿದೆ.

ಕೊಡ ಮೊಡಗು ಗ್ರಾಮದಲ್ಲಿ ಜನರಿಗೆ ಕುಡಿವ ನೀರಿನ ಸಮಸ್ಯೆಯಿದ್ದು, ನೀರಿಗಾಗಿ ಗ್ರಾಮಸ್ಥರು ಸಮೀಪದ ಆಂಧ್ರದ ಆರ್.ಕೊಟ್ಟಾಲ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ಗ್ರಾಮಸ್ಥರು ಹೀನಾಮಾನವಾಗಿ ಬೈದು ದಂಡ ವಿಧಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ನಮ್ಮ ಊರಿನಲ್ಲಿ ಕುಡಿವ ನೀರಿನ ವ್ಯವಸ್ಥೆ ಇದ್ದಿದ್ದರೆ ನಾವು ಯಾಕೆ ಪಕ್ಕದ ಊರಿಗೆ ಹೋಗುತ್ತಿದ್ದೆವು. ಅವರಿಂದಾದ ಅವಮಾನ ಮಾಡಿಸಿಕೊಂಡು ಬರುತ್ತಿದ್ದೆವು. ನಮ್ಮ ಸಮಸ್ಯೆ ಕುರಿತಂತೆ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details