ಕರ್ನಾಟಕ

karnataka

By

Published : Feb 14, 2021, 8:58 PM IST

Updated : Feb 14, 2021, 9:31 PM IST

ETV Bharat / state

ದಾಬಸ್ ಪೇಟೆಯತ್ತ ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ

ತುಮಕೂರಿನಿಂದ ದಾಬಸ್ ಪೇಟೆಯತ್ತ ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ ಸಾಗಿದ್ದು, ನಾಳೆ ದಾಬಸ್ ಪೇಟೆಯಿಂದ ನೆಲಮಂಗಲದತ್ತ ಪಾದಯಾತ್ರೆ ಸಾಗಲಿದೆ.

ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ
ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ

ತುಮಕೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಆರಂಭವಾಗಿರುವ ಪಾದಯಾತ್ರೆ ಇಂದು ತುಮಕೂರು ಜಿಲ್ಲೆಯನ್ನು ದಾಟಿ ದಾಬಸ್ ಪೇಟೆಯಿಂದ ಹೆಜ್ಜೆ ಹಾಕಿತು.

ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ

ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿ ಪಂಚಮಸಾಲಿ ಸಮುದಾಯದವರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ನಿನ್ನೆಯಷ್ಟೇ 5ಕ್ಕೂ ಹೆಚ್ಚು ವಿವಿಧ ಮಠಾಧೀಶರು ಪಾದಯಾತ್ರೆಗೆ ಬೆಂಬಲ ಸೂಚಿಸಿ ಸಾಥ್ ನೀಡಿದ್ದಾರೆ.

ಓದಿ: ಮೀಸಲಾತಿ ಹೋರಾಟಕ್ಕೆ ವೀರಶೈವ ಶ್ರೀಗಳ ಬೆಂಬಲ ಖುಷಿ ಕೊಟ್ಟಿದೆ: ಜಯಮೃತ್ಯುಂಜಯ ಸ್ವಾಮೀಜಿ

ನಾಳೆ ದಾಬಸ್ ಪೇಟೆಯಿಂದ ನೆಲಮಂಗಲದತ್ತ ಪಾದಯಾತ್ರೆ ಸಾಗಲಿದೆ. ಪಾದಯಾತ್ರೆಯಲ್ಲಿ ವಚನಾನಂದ ಸ್ವಾಮಿ ಸಹ ಭಾಗವಹಿಸಿದ್ದಾರೆ.

Last Updated : Feb 14, 2021, 9:31 PM IST

ABOUT THE AUTHOR

...view details