ಕರ್ನಾಟಕ

karnataka

ETV Bharat / state

ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸುವಂತೆ ಕಡಲಕೆರೆ ಗ್ರಾಮಸ್ಥರಿಂದ ಆಕ್ರೋಶ

ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಹಲವು ದಿನಗಳಾಗಿವೆ. ಅದರ ದುರಸ್ತಿ ಬಗ್ಗೆ ಗ್ರಾಮದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಪಿಡಿಒ ಗಮನ ಹರಿಸುತ್ತಿಲ್ಲ ಎಂದು ಕಡಲಕೆರೆ ಗ್ರಾಮದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

clean drinking water unit
ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲು ಆಕ್ರೋಶ

By

Published : Apr 26, 2020, 11:10 AM IST

ತುಮಕೂರು/ಪಾವಗಡ:ನಗರದ ಕಡಲಕೆರೆ ಗ್ರಾಮದಲ್ಲಿಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಬಹುದಿನಗಳೇ ಕಳೆದಿದೆ. ಆದರೆ ಇದರ ಬಗ್ಗೆ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷರು ಸದಸ್ಯರಿದ್ದರೂ ನಮ್ಮ ಗೋಳು ಕೇಳೋರಿಲ್ಲ ಎಂದು ಗ್ರಾಮದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರಾದ ರಂಗಪ್ಪ ಮಾತನಾಡಿ ಕೊರೊನಾ ವೈರಸ್​​ನಿಂದ ಯಾವುದೇ ಸಾಮಗ್ರಿಗಳು ಸಿಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಹಲವು ದಿನಗಳಾಗಿದೆ ಅದರ ದುರಸ್ತಿಯ ಬಗ್ಗೆ ಗ್ರಾಮದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಪಿಡಿಒ ಗಮನಕ್ಕೆ ತಂದರು ಯಾರೂ ಕೂಡ ಗಮನ ಹರಿಸದ ಕಾರಣ ನೀರಿಗಾಗಿ ಪಕ್ಕದಲ್ಲಿನ ಅಚ್ಚಮ್ಮನಹಳ್ಳಿ ಗ್ರಾಮಕ್ಕೆ ತೆರಳಿದರೆ ಅನ್ಯ ಗ್ರಾಮದವರು ಬರಬೇಡಿ ಕೊರೊನಾ ಹರಡುತ್ತದೆ ಎನ್ನುತ್ತಾರೆ. ಇನ್ನು ನಮಗೆ ನೀರು ಸಿಗುವುದು ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲು ಕಡಲಕೆರೆ ಗ್ರಾಮಸ್ಥರಿಂದ ಆಕ್ರೋಶ.

ಇನ್ನು ಶುದ್ಧ ಕುಡಿಯುವ ನೀರಿಗಾಗಿ ಗೋರಸಮಾವು, ಅಚ್ಚಮ್ಮನಹಳ್ಳಿ, ಅರೆಕ್ಯಾತನಹಳ್ಳಿ ತೆರಳಿದರೂ ಕೊರೊನಾ ವೈರಸ್ ಹರಡುತ್ತದೆ ನೀವು ನೀರಿಗಾಗಿ ಬರಬೇಡಿ ಎನ್ನುವ ಕಾರಣ ಫ್ಲೋರೈಡ್ ನೀರು ಕುಡಿದು ಜನರ ಆರೋಗ್ಯದ ಸಮಸ್ಯೆಗಳನ್ನು ಕಾಣುವಂತಾಗಿದೆ. ಕೂಡಲೇ ಘಟಕವನ್ನು ಸರಿಪಡಿಸಿ ಶುದ್ಧ ನೀರು ನೀಡಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ABOUT THE AUTHOR

...view details