ಕರ್ನಾಟಕ

karnataka

ETV Bharat / state

ರಿಲಾಯನ್ಸ್ ಜಿಯೋ ಸೇರಿದಂತೆ ಇತರೆ ನಾಲ್ಕು ಏಜೆನ್ಸಿಗಳಿಗೆ ದಂಡ ಹಾಕಿದ ಪಾಲಿಕೆ

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್​ ಸಿಟಿ ಕಾಮಗಾರಿ ವೇಳೆ ರಸ್ತೆ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದ ರಿಲಾಯನ್ಸ್ ಜಿಯೋ ಸೇರಿದಂತೆ ನಾಲ್ಕು ಇಲಾಖೆ ಹಾಗೂ ಏಜೆನ್ಸಿಗಳಿಗೆ ಪಾಲಿಕೆ ಬರೋಬ್ಬರಿ 1 ಕೋಟಿ ರೂ. ದಂಡ ವಿಧಿಸಿದೆ.

municipal-commissioner-fine-for-relience-jio
ರಿಲೆಯನ್ಸ್ ಜಿಯೋ ಸೇರಿದಂತೆ ಇತರೆ ನಾಲ್ಕು ಏಜೆನ್ಸಿಗಳಿಗೆ ದಂಡ ಹಾಕಿದ ಪಾಲಿಕೆ ಆಯುಕ್ತ

By

Published : Mar 4, 2020, 11:45 PM IST

ತುಮಕೂರು :ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್​ ಸಿಟಿ ಕಾಮಗಾರಿ ವೇಳೆ ರಸ್ತೆ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದ ರಿಲಾಯನ್ಸ್ ಜಿಯೋ ಸೇರಿದಂತೆ ನಾಲ್ಕು ಇಲಾಖೆ ಹಾಗೂ ಏಜೆನ್ಸಿಗಳಿಗೆ ಬರೋಬ್ಬರಿ 1 ಕೋಟಿ ರೂ. ದಂಡ ವಿಧಿಸಲಾಗಿದೆ.

ಅಗೆದಿರುವ ರಸ್ತೆಗಳ ಯಥಾಸ್ಥಿತಿ ಕಾಪಾಡದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಕೆಯುಡಬ್ಲ್ಯುಎಸ್ ಅಂಡ್ ಡಿಬಿ) 60 ಲಕ್ಷ ರೂ, ಬೆಸ್ಕಾಂ ಸಂಸ್ಥೆಗೆ 10 ಲಕ್ಷ ರೂ, ಮೆಗಾ ಗ್ಯಾಸ್ ಕಂಪನಿಗೆ 20 ಲಕ್ಷ ರೂ, ಹಾಗೂ ರಿಲಾಯನ್ಸ್ ಜಿಯೋ ಕಂಪನಿಗೆ 10 ಲಕ್ಷ ರೂ. ಗಳ ದಂಡ ವಿಧಿಸಿ ಪಾಲಿಕೆ ಆಯುಕ್ತ ಭೂ ಬಾಲನ್ ಆದೇಶ ಹೊರಡಿಸಿದ್ದಾರೆ.

ರಿಲೆಯನ್ಸ್ ಜಿಯೋ ಸೇರಿದಂತೆ ಇತರೆ ನಾಲ್ಕು ಏಜೆನ್ಸಿಗಳಿಗೆ ದಂಡ ಹಾಕಿದ ಪಾಲಿಕೆ ಆಯುಕ್ತ

ವಿವಿಧ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ಸಮರ್ಪಕವಾಗಿ ಮಾಡದೆ ಇರುವುದರಿಂದ ನಗರದಲ್ಲಿ ಧೂಳು ಹೆಚ್ಚಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ವಿವಿಧ ಕಾಮಗಾರಿ ಪೂರ್ಣಗೊಂಡ ನಂತರ ತುರ್ತಾಗಿ ಯಥಾಸ್ಥಿತಿಯಲ್ಲಿ ನಿರ್ವಹಣೆ ಮಾಡುವಂತೆ ಸೂಚಿಸಲಾಗಿತ್ತು. ಹೀಗಿದ್ದರೂ ನಿರ್ಲಕ್ಷ್ಯ ತೋರಿದ ಇಲಾಖೆ ಮತ್ತು ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಗೆದಿರುವ ರಸ್ತೆಗಳ ಕಡಿಮೆ ಅವಧಿಯಲ್ಲಿ ಸಮರ್ಪಕವಾಗಿ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸೂಚಿಸಲಾಗಿದೆ. ತಪ್ಪಿದಲ್ಲಿ ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದ್ದಾರೆ.

ABOUT THE AUTHOR

...view details