ಕರ್ನಾಟಕ

karnataka

ETV Bharat / state

ಕುಡಿವ ನೀರು ಸರಬರಾಜು ಕಾಮಗಾರಿಯಲ್ಲಿ ಬಾರಿ ಲೋಪ ಕಂಡು ಬಂದಿದೆ: ಸಂಸದ ಜಿ.ಎಸ್.ಬಸವರಾಜ್ - ಎಲ್ ಅಂಡ್ ಟಿ ಕಂಪನಿ

ತುಮಕೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಟೆಂಡರ್‌ ಪಡೆದು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಎಲ್ ಅಂಡ್ ಟಿ ಕಂಪನಿಯವರನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸಲು ಮಹಾನಗರ ಪಾಲಿಕೆಯಲ್ಲಿ ನಿರ್ಧರಿಸಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜ್ ಹೇಳಿದರು.

MP G.S. Basavaraj
ಸಂಸದ ಜಿ.ಎಸ್.ಬಸವರಾಜ್

By

Published : Mar 16, 2021, 10:29 AM IST

ತುಮಕೂರು: ತುಮಕೂರು ನಗರ ವ್ಯಾಪ್ತಿಯಲ್ಲಿನ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಾಮಗಾರಿಯಲ್ಲಿ ಬಾರಿ ಲೋಪ ಕಂಡು ಬಂದಿದೆ ಎಂದು ಸಂಸದ ಜಿ.ಎಸ್.ಬಸವರಾಜ್ ಆರೋಪಿಸಿದ್ದಾರೆ.

ಕುಡಿಯುವ ನೀರು ಸರಬರಾಜು ಕಾಮಗಾರಿಯಲ್ಲಿ ಬಾರಿ ಲೋಪ ಕಂಡುಬಂದಿದೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳಚೆ ನೀರು ಹಾಗು ಕುಡಿಯುವ ಸೇರಿ ಹೋಗುವ ರೀತಿಯಲ್ಲಿ ಕಾಮಗಾರಿಗಳನ್ನು ಮಾಡಲಾಗಿದೆ. ಈ ಕೊಳಚೆ ನೀರು ಕುಡಿದು ಸಾರ್ವಜನಿಕರು ಜಾಂಡೀಸ್ ಕಾಯಿಲೆಗೆ ತುತ್ತಾಗುವ ಆತಂಕವಿದೆ ಎದುರಾಗಿದೆ. ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಾಮಗಾರಿಯಯನ್ನು ಎಲ್​ ಅಂಡ್ ಟಿ ಹೆಸರಿನ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಈ ಕಂಪನಿಯ ಕೆಲವರು ತುಂಡು ಗುತ್ತಿಗೆ ನೀಡಿ, ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದಾರೆ. ಹೀಗಾಗಿ, ಕಾನ್ಪುರ ಮತ್ತು ಮಧ್ಯಪ್ರದೇಶದಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿ ರೀತಿಯಲ್ಲಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಓದಿ:ಕೊಡಗಿನಲ್ಲಿ ಮುಂದುವರಿದ ವ್ಯಾಘ್ರನ ಅಟ್ಟಹಾಸ: ಮತ್ತೊಂದು ಹಸು ಬಲಿ

ಇನ್ನು, ಕಾಮಗಾರಿಗಳ ಟೆಂಡರ್‌ ಪಡೆದು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಎಲ್ ಅಂಡ್ ಟಿ ಕಂಪನಿಯವರನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸಲು ಮಹಾನಗರ ಪಾಲಿಕೆಯಲ್ಲಿ ನಿರ್ಧರಿಸಲಾಗುವುದು ಎಂದರು.

ABOUT THE AUTHOR

...view details