ಕರ್ನಾಟಕ

karnataka

ETV Bharat / state

ಕಲ್ಪತರು ನಾಡಿಗೆ ರಾಜ್ಯ ಸರ್ಕಾರದಿಂದ ಅನ್ಯಾಯ:  ಸೊಗಡು ಗುಡುಗು - kannada news

ರಾಜ್ಯ ಸರ್ಕಾರ ತುಮಕೂರು ಜಿಲ್ಲೆಗೆ ಮಲತಾಯಿ ಧೋರಣೆ ಮಾಡುತ್ತಿದೆ, ಇದು ಸರ್ಕಾರದ ರೀತಿ ಕಾರ್ಯನಿರ್ವಹಿಸುತ್ತಿಲ್ಲ. ದೊಡ್ಡ ಕಾರ್ಪೊರೇಟ್ ಸೊಸೈಟಿಯ ರೀತಿ ರೀತಿಯಲ್ಲಿ ಕಾಣಿಸುತ್ತಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ.

ಮಾಜಿ ಸಚಿವ ಸೊಗಡು ಶಿವಣ್ಣ

By

Published : May 28, 2019, 7:42 PM IST

ತುಮಕೂರು : ರಾಜ್ಯ ಸರ್ಕಾರ ನೀರಿನ ವಿಷಯದಲ್ಲಿ ಜಿಲ್ಲೆಗೆ ಮಲತಾಯಿ ಧೋರಣೆ ತೋರುತ್ತಿದೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಹಾಗೂ ಅಧಿಕಾರದ ಹಿಂದೆ ಬೀಳುತ್ತಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಗರಿಕರೇ ನಮಗೆ ಬುದ್ಧಿ ಹೇಳುವ ಮೂಲಕ, ದೇಶಾಭಿಮಾನದ ಪಾಠ ಹೇಳಿಕೊಟ್ಟಿದ್ದಾರೆ. ದೇಶವನ್ನು ಮುನ್ನಡೆಸುವ ಸಾಮರ್ಥ್ಯ ನರೇಂದ್ರ ಮೋದಿಗೆ ಇದೆ. ಹಾಗಾಗಿ ಬಿಜೆಪಿಯನ್ನ ಮತದಾರರು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆಗಾಲಕ್ಕೂ ಮುನ್ನ ಹೇಮಾವತಿ ಕೆನಾಲ್​ ನಲ್ಲಿ ಇರುವ ಹೂಳು ತೆಗೆಯುವ ಕಾರ್ಯವನ್ನ ಅಧಿಕಾರಿಗಳು ಮಾಡುತ್ತಿಲ್ಲ, ಮೈಸೂರು ಭಾಗಕ್ಕೆ ಸೇರುವ ಕೆ ಆರ್ ಎಸ್ ಜಲಾಶಯಕ್ಕೆ 500 ಕೋಟಿ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ, ನಮ್ಮ ಜಿಲ್ಲೆಗೂ 10 ರಿಂದ 15 ಕೋಟಿ ಹಣ ನೀಡಿದ್ರೆ ಜಿಲ್ಲೆಗೆ ನೀರು ದೊರೆಯುತ್ತಿತ್ತು ಎಂದರು.

ಮಾಜಿ ಸಚಿವ ಸೊಗಡು ಶಿವಣ್ಣ

ಇನ್ನೂ ಕಾಲ ಮಿಂಚಿಲ್ಲ ಜೂನ್ ಹತ್ತರೊಳಗೆ ಹೂಳು ಎತ್ತುವ ಕಾರ್ಯವನ್ನು ಮಾಡದೇ ಇದ್ದರೆ ಜಿಲ್ಲೆಗೆ ಕುಡಿವ ನೀರು ದೊರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರ ಜಿಲ್ಲೆಗೆ ಮಲತಾಯಿ ಧೋರಣೆ ಮಾಡುತ್ತಿದೆ, ಇದು ಸರ್ಕಾರದ ರೀತಿ ಕಾರ್ಯನಿರ್ವಹಿಸುತ್ತಿಲ್ಲ. ದೊಡ್ಡ ಕಾರ್ಪೊರೇಟ್ ಸೊಸೈಟಿಯ ರೀತಿ ರೀತಿಯಲ್ಲಿ ಕಾಣಿಸುತ್ತಿದೆ ಎಂದು ರಾಜ್ಯ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು.

ABOUT THE AUTHOR

...view details