ತುಮಕೂರು: ಜಿಲ್ಲೆಯಾದ್ಯಂತ ಕಳೆದ ಅನೇಕ ದಿನಗಳಿಂದ ಸುರಿದ ಭಾರಿ ಮಳೆ(heavy rain in Tumakuru)ಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ಸಾಕಷ್ಟು ಅವಾಂತರಗಳು ಕೂಡ ಸಂಭವಿಸಿವೆ. ಮನೆಗಳು ಹಾಗೂ ಬೃಹತ್ ಮರಗಳು ಕೂಡಾ ಧರೆಗುರುಳುತ್ತಿವೆ.
Watch Video- ಭಾರಿ ಮಳೆಗೆ ಧರೆಗುರುಳಿತು 60 ವರ್ಷದ ಬೃಹತ್ ಮರ
ಧಾರಾಕಾರ ಮಳೆಯಿಂದಾಗಿ(heavy rain in Tumakuru) ಕೊರಟಗೆರೆ ತಾಲೂಕಿನ ಫಕೀರಪ್ಪನಪಾಳ್ಯದ ಬಳಿಯ ಸೇತುವೆಗೆ ಹೊಂದಿಕೊಂಡಿದ್ದ ಬೃಹತ್ ಮರವೊಂದು ನೋಡನೋಡುತ್ತಿದ್ದಂತೆ ನೆಲಕ್ಕುರುಳಿದೆ. ನೀರು ಹರಿಯುವ ರಭಸಕ್ಕೆ ಮಣ್ಣು ಸವೆದು ಮರ ನೆಲ ಕಚ್ಚಿದೆ ಎಂದು ತಿಳಿದು ಬಂದಿದೆ.
ಧರೆಗುರುಳಿದ ಮರ
ಕೊರಟಗೆರೆ ತಾಲೂಕಿನ ಫಕೀರಪ್ಪನಪಾಳ್ಯದ ಬಳಿಯ ಸೇತುವೆಗೆ ಹೊಂದಿಕೊಂಡಿದ್ದ ಬೃಹತ್ ಮರ ನೋಡನೋಡುತ್ತಿದ್ದಂತೆ ನೆಲಕ್ಕುರುಳಿದೆ. ನೀರು ಹರಿಯುವ ರಭಸಕ್ಕೆ ಮಣ್ಣು ಸವೆದು ಮರ ನೆಲಕಚ್ಚಿದೆ. ಸುಮಾರು 60 ವರ್ಷದ ಹಳೆಯ ಮರವಾಗಿದ್ದು, ನಿರಂತರವಾಗಿ ಮರದ ಬಳಿ ಹರಿದ ನೀರಿನಿಂದಾಗಿ ಭೂಮಿ ಸಾಕಷ್ಟು ತೇವಾಂಶವಿತ್ತು, ಹೀಗಾಗಿ ಮರ ಬುಡಸಮೇತ ಉರುಳಿ ಬಿದ್ದಿದೆ.