ಕರ್ನಾಟಕ

karnataka

ETV Bharat / state

ಕೊರೊನಾಗೆ ದೊಡ್ಡಮ್ಮ ಬಲಿ: ಸುದ್ದಿ ಕೇಳಿ ಹೃದಯಾಘಾತದಿಂದ ಮಗಳು ಸಾವು - ಹೃದಯಾಘಾತದಿಂದ ಸಾವನ್ನಪ್ಪಿದ ಯುವತಿ

ದೊಡ್ಡಮ್ಮನ ಸಾವಿನ ಸುದ್ದಿ ಜಾಗೃತಿಗೆ ಒಂದು ಆಘಾತ ಸೃಷ್ಟಿಸಿತ್ತು. ಇದರಿಂದಾಗಿ ಹೃದಯಾಘಾತಕ್ಕೆ ಒಳಗಾದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

tumkur
ತುಮಕೂರು

By

Published : Apr 29, 2021, 10:26 AM IST

ತುಮಕೂರು:ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟ ವಿಷಯ ಕೇಳಿ ಮನೆಯಲ್ಲಿದ್ದ ಯುವತಿಯೊಬ್ಬಳು ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಾಗೃತಿ (19) ಮೃತ ಯುವತಿ. ಮಂಗಳವಾರ ರಾತ್ರಿ ಮಲ್ಲಿಕಾ (45) ಎಂಬುವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಬುಧವಾರ ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇದನ್ನು ತಿಳಿದ ಮಲ್ಲಿಕಾ ಅವರ ಮನೆಯಲ್ಲಿ ಇದ್ದ ಮೈದುನನ ಮಗಳು ಜಾಗೃತಿ ತೀವ್ರ ಹೃದಯಾಘಾತಕ್ಕೆ ಒಳಗಾದರು. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ.

ಹಲವು ದಿನಗಳಿಂದ ಮಲ್ಲಿಕಾ ಜಾಗೃತಿಯನ್ನು ಆರೈಕೆ ಮಾಡುತ್ತಿದ್ದರು. ದೊಡ್ಡಮ್ಮನ ಸಾವಿನ ಸುದ್ದಿ ಜಾಗೃತಿಗೆ ಒಂದು ಆಘಾತ ಸೃಷ್ಟಿಸಿತ್ತು. ಇದರಿಂದಾಗಿ ಹೃದಯಾಘಾತಕ್ಕೆ ಒಳಗಾದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಓದಿ:ಕೋವಿಡ್‌ ಸೋಂಕು ತಗುಲಿ ಸ್ಯಾಂಡಲ್​ವುಡ್​ ನಿರ್ಮಾಪಕ ಚಂದ್ರಶೇಖರ್ ನಿಧನ

ABOUT THE AUTHOR

...view details