ತುಮಕೂರು: ಮಾನಸಿಕ ವೇದನೆಯಿಂದ ಬೇಸತ್ತು ಆಹಾರ ನಿಗಮದ ಗೋಡೌನ್ ಅಧಿಕಾರಿ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಮೇಶ್ (52) ಆತ್ಮಹತ್ಯೆಗೆ ಶರಣಾದ ಅಧಿಕಾರಿಯಾಗಿದ್ದಾರೆ. ಪಾವಗಡದ ಜೈನ್ ಲೇ ಔಟ್ನಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಹಾರ ಸರಬರಾಜು ಇಲಾಖೆ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಆಹಾರ ಸರಬರಾಜು ಗೋಡೌನ್ ಮ್ಯಾನೇಜರ್ ನೇಣಿಗೆ ಶರಣಾಗಿರುವ ಘಟನೆ ಪಾವಗಡದಲ್ಲಿ ನಡೆದಿದೆ.
ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಪಾವಗಡ ಸರ್ಕಾರಿ ಆಹಾರ ಸರಬರಾಜು ಗೋಡೌನ್ನ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 20 ದಿನದ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದರು.
ಆದ್ರೆ ಡೆತ್ನೋಟ್ನಲ್ಲಿ ಏನಿದೆ ಎಂಬುದರ ಮಾಹಿತಿ ಸಿಕ್ಕಿಲ್ಲ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.