ತುಮಕೂರು:ಹಣ ದೋಚುವ ಹುನ್ನಾರದಿಂದ ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಐವರು ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಕೊಲೆಗೈದಿದ್ದ ಐವರು ಆರೋಪಿಗಳ ಬಂಧನ.... - ಯುವತಿ ಕೊಲೆ
ಹಣದ ಆಸೆಗಾಗಿ ತುಮಕೂರು ನಗರದ ಮರಳೇನಹಳ್ಳಿ ರಸ್ತೆಯ ಡಿಎಂ ಪಾಳ್ಯದಲ್ಲಿ 23 ವರ್ಷದ ಯುವತಿಯನ್ನು ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಐವರು ಆರೋಪಿಗಳ ಬಂಧನ
ಮಾರುತಿ, ಧನರಾಜ ನಾಯ್ಕ, ರಾಜೇಶ, ಮನು, ಧನು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದು ಸ್ವಿಫ್ಟ್ ಕಾರು, ಎರಡು ಕಬ್ಬಿಣದ ರಾಡುಗಳು, 7 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆಗಸ್ಟ್ 21ರಂದು ರಾತ್ರಿ 11 ಗಂಟೆ ಸಂದರ್ಭದಲ್ಲಿ ತುಮಕೂರು ನಗರದ ಮರಳೇನಹಳ್ಳಿ ರಸ್ತೆಯ ಡಿಎಂ ಪಾಳ್ಯದಲ್ಲಿ 23 ವರ್ಷದ ಅಂಜಲಿ ಎಂಬುವರನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐವರು ಆರೋಪಿಗಳು ಹಣದ ಆಸೆಗಾಗಿ ಅಂಜಲಿ ಎಂಬುವರನ್ನು ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.