ಕರ್ನಾಟಕ

karnataka

By

Published : Nov 9, 2019, 6:32 AM IST

ETV Bharat / state

ಕಳಪೆ ಬಿತ್ತನೆ ಬೀಜ ಪೂರೈಕೆ ಆರೋಪ, ಪರಿಹಾರಕ್ಕಾಗಿ ತಹಶಿಲ್ದಾರ್ ಮೊರೆ ಹೋದ ರೈತರು

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಮಿಲ್​ಗಳಿಂದ ಖರೀದಿಸಿದ ಬಿತ್ತನೆ ಶೇಂಗಾ ಬೀಜ 10 ದಿನವಾದರೂ ಮೊಳಕೆ ಒಡೆಯದ ಕಾರಣ ಸೂಕ್ತ ಪರಿಹಾರ ನೀಡಲು, ರೈತರು ತಹಶಿಲ್ದಾರ್​ಗೆ ಮನವಿ ಪತ್ರ ಸಲ್ಲಿಸಿದರು.

ಪರಿಹಾರಕ್ಕಾಗಿ ತಹಶಿಲ್ದಾರ್ ಮೊರೆ ಹೋದ ರೈತರು

ತುಮಕೂರು :ಪಾವಗಡ ಪಟ್ಟಣದ ಮಿಲ್​ಗಳಿಂದ ಖರೀದಿಸಿದ ಬಿತ್ತನೆ ಶೇಂಗಾ ಬೀಜ 10 ದಿನವಾದರೂ ಮೊಳಕೆ ಒಡೆಯದ ಕಾರಣ, ಸೂಕ್ತ ಪರಿಹಾರ ನೀಡಲು ಖರೀದಿಸಿದ ರೈತರು ತಹಶಿಲ್ದಾರ್​ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ವೇಳೆ ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮಾತನಾಡಿ, ಚಿಕ್ಕಹಳ್ಳಿ ಗ್ರಾಮದ ಸುಮಾರು 11 ರೈತರು ಪಾವಗಡ ಪಟ್ಟಣದ ಬೋಮ್ಮತನಹಳ್ಳಿ ರಸ್ತೆಯ ಮಾರುತಿ ಮಿಲ್​ನಲ್ಲಿ ಬಿತ್ತನೆ ಶೇಂಗಾ ಬೀಜ ಖರೀದಿಸಿದ್ದಾರೆ.

ಪರಿಹಾರಕ್ಕಾಗಿ ತಹಶಿಲ್ದಾರ್ ಮೊರೆ ಹೋದ ರೈತರು

ಆದರೆ ಹತ್ತು ದಿನಗಳ ಮೇಲಾದರು ಬೀಜ ಮೊಳಕೆ ಒಡೆಯದ ಕಾರಣ ಕಳಪೆ ಬಿತ್ತನೆ ಬೀಜ ಪೂರೈಕೆ ಮಾಡಿದ ಮಿಲ್ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details