ತುಮಕೂರು: ಲಾಕ್ಡೌನ್ ವೇಳೆ ಹುಟ್ಟುಹಬ್ಬ ಆಚರಿಸಿಕೊಂಡು ಟೀಕೆಗೆ ಗುರಿಯಾಗಿದ್ದ ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಕೃಷಿ ಉತ್ಪನ್ನಗಳನ್ನು ಖರೀದಿಸಿ ರೈತರಿಗೆ ನೆರವಾಗುತ್ತಿದ್ದಾರೆ.
ಹುಟ್ಟುಹಬ್ಬ ಆಚರಿಸಿ ಟೀಕೆಗೆ ಗುರಿಯಾಗಿದ್ದ ಶಾಸಕ ಮಸಾಲೆ ಜಯರಾಂರಿಂದ ರೈತರಿಗೆ ನೆರವು!
ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ರೈತರು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಖರೀದಿಸಿ ಜನರಿಗೆ ವಿತರಿಸಲು ಮುಂದಾಗಿದ್ದಾರೆ.
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರು ಮಾರಾಟ ಮಾಡಲಾಗದೇ ತೋಟದಲ್ಲಿ ಉಳಿಸಿಕೊಂಡ ಕೃಷಿ ಉತ್ಪನ್ನಗಳನ್ನು ಖರೀದಿಸಿದ್ದಾರೆ. ರೈತರ ಕೃಷಿ ತೋಟಗಳಿಗೆ ತೆರಳಿ ಬಾಳೆ, ಕಲ್ಲಂಗಡಿ, ಮೆಣಸಿನಕಾಯಿ ಖರೀದಿಸುತ್ತಿರುವ ಶಾಸಕ ಮಸಾಲೆ ಜಯರಾಂ, ಸಂಕಷ್ಟದ ದಿನಗಳಲ್ಲಿ ಕೈಗೆ ಬಂದ ಬೆಳೆ ನಷ್ಟವಾಗುವ ಭೀತಿಯಲ್ಲಿದ್ದ ರೈತರ ನೆರವಿಗೆ ಬಂದಿದ್ದಾರೆ.
ರೈತರಿಂದ ಕೊಂಡ ಉತ್ಪನ್ನಗಳನ್ನು ತಾಲೂಕು ಆಡಳಿತದಿಂದ ಹಂಚಿಕೆಗೆ ಸಿದ್ಧತೆ ನಡೆಸಿದ್ದಾರೆ. ತುರುವೇಕೆರೆ ತಾಲೂಕಿನ ಗೈನಾಥಪುರ, ಬೊಮ್ಮೇನಹಳ್ಳಿ, ನರಿಗೇನಹಳ್ಳಿ ಗ್ರಾಮಗಳ ರೈತರ ಬೆಳೆ ಖರೀದಿಸುತ್ತಿದ್ದಾರೆ. ಆದರೆ ಖರೀದಿ ಮಾಡುವ ಭರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಸಹ ಈಗ ಟೀಕೆಗೆ ಗುರಿಯಾಗಿದೆ.