ಕರ್ನಾಟಕ

karnataka

By

Published : Oct 27, 2019, 5:09 PM IST

ETV Bharat / state

ಡಿಕೆಶಿ ಒಡೆದ ಬಂಡೆಯಾದ್ರೂ ದೈರ್ಯದಿಂದ ಎಲ್ಲವನ್ನೂ ಎದುರಿಸ್ತಾರೆ: ಕಾಡುಸಿದ್ದೇಶ್ವರ ಶ್ರೀ

ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡು ತಿಹಾರ್ ಜೈಲಿಂದ ರಿಲೀಸ್ ಆಗಿ ನಿನ್ನೆಯಷ್ಟೆ ಬೆಂಗಳೂರಿಗೆ ಆಗಮಿಸಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ.

ಡಾ. ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಕಾಡು ಸಿದ್ದೇಶ್ವರ ಮಠದ

ತುಮಕೂರು: ಡಿಕೆಶಿ ಒಡೆದ ಬಂಡೆಯಾದರೂ ಸಹ ಆ ಬಂಡೆ ಶಾಶ್ವತವಾಗಿ ಧೈರ್ಯ, ಸಾಹಸದಿಂದ ಮುಂದಿನದನ್ನು ಎದುರಿಸುತ್ತದೆ ಎಂದು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಡಾ. ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಕಾಡು ಸಿದ್ದೇಶ್ವರ ಮಠ

ಈ ಬಗ್ಗೆ ಮಾತನಾಡಿದ ಶ್ರೀಗಳು, ಶ್ರೀ ಮಠದ ಭಕ್ತರಾದ ಡಿ.ಕೆ.ಶಿವಕುಮಾರ್ 57 ದಿನಗಳ ಕಾರಾಗೃಹ ವಾಸದಿಂದ ಹೊರಬಂದಿದ್ದು, ಇಂದು ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಮಠಕ್ಕೆ ಬಂದ ನಂತರ ಗದ್ದುಗೆಗೆ ಮಂಗಳಾರತಿ ಮಾಡಿ, ನಂತರ ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿಸಿದ್ರು.

ಡಿಕೆಶಿ ಯಾರೂ ಮಾಡದೇ ಇರುವುದೇನೂ ಮಾಡಿಲ್ಲ. ಅವರೀಗ ಒಡೆದ ಬಂಡೆಯಾದರೂ ಸಹ ಬಂಡೆ ಶಾಶ್ವತವಾಗಿ ಧೈರ್ಯ ಸಾಹಸದಿಂದ ಮುಂದಿನ ದಿನಗಳನ್ನು ಎದುರಿಸುತ್ತಾರೆ. ಆರೋಪ ಮುಕ್ತರಾಗಲು ಅವರಲ್ಲಿ ಪ್ರಾರಬ್ಧ ದೋಷವಿದೆ. ನಡೆಯುವವರು ಎಡವದೆ ಕೂಳಿವರು ಎಡವುತ್ತಾರೆಯೇ? ಎಂದು ಹೇಳಿದ್ರು.

ABOUT THE AUTHOR

...view details