ತುಮಕೂರು: ಪಡಿತರ ವಿತರಣೆ ಮಾಡಲು ಕಳಪೆ ಗುಣಮಟ್ಟದ ಬೇಳೆ ಸರಬರಾಜು ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಖಾತೆ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ತುಮಕೂರು ತಾಲೂಕಿನ ಬುಗುಡನಹಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಲ್ಲಿ ಕಳಪೆ ಬೇಳೆ ಸರಬರಾಜು ಆಗಿದೆ ಅದನ್ನು ಜನರಿಗೆ ವಿತರಣೆ ಮಾಡಬಾರದು ಎಂದು ಸೂಚಿಸಿದ್ದೇನೆ ಎಂದರು.
ಕಳಪೆ ಗುಣಮಟ್ಟದ ಬೇಳೆ ಪೂರೈಸಿದವರ ವಿರುದ್ಧ ಕ್ರಿಮಿನಲ್ ಕೇಸ್: ಸಚಿವ ಗೋಪಾಲಯ್ಯ - Action against contractors
ಲಾಕ್ಡೌನ್ ನಡುವೆಯೂ ಹಲವೆಡೆ ಪಡಿತರ ಹಾಗೂ ಬೇಳೆ ವಿತರಣೆಯಲ್ಲಿ ವಂಚನೆ ನಡೆಸುತ್ತಿರುವ ಘಟನೆ ನಡೆದಿವೆ. ಈ ಕುರಿತು ಮಾತನಾಡಿರುವ ಸಚಿವ ಗೋಪಾಲಯ್ಯ, ಕಳಪೆ ಗುಣಮಟ್ಟದ ಬೇಳೆ ಕಾಳುಗಳನ್ನು ಸರಬರಾಜು ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.
ಕಳಪೆ ಗುಣಮಟ್ಟದ ಬೇಳೆ ನೀಡುವವರ ವಿರುದ್ಧ ಕ್ರಿಮಿನಲ್ ಕೇಸ್: ಸಚಿವ ಗೋಪಾಲಯ್ಯ
ಅಲ್ಲದೆ ಈಗಾಗಲೇ ರಾಯಚೂರಿನಲ್ಲಿ ಕೇಸು ದಾಖಲಿಸಲಾಗಿದೆ. ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಮಾಡಲು ಈಗಾಗಲೇ ಸೂಚಿಸಿದ್ದೇನೆ ಎಂದರು.
ಕಳಪೆ ಮಟ್ಟದ ಬೇಳೆ ಬಂದಲ್ಲಿ ರೇಷನ್ ಅಂಗಡಿಯವರು ಕೂಡಲೇ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. 24 ಗಂಟೆಗಳಲ್ಲಿ ಗುತ್ತಿಗೆದಾರರ ಬದಲಾವಣೆ ಮಾಡಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.