ತುಮಕೂರು: ಲಕ್ಷಣರಹಿತ 89 ಮಂದಿ, ನಾಲ್ವರು ಗರ್ಭಿಣಿಯರು ಸೇರಿದಂತೆ ಒಟ್ಟು 135 ಮಂದಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ.
ತಿಪಟೂರು ಪೊಲೀಸ್ ಠಾಣೆಯ ಓರ್ವ ಪೊಲೀಸ್ ಸಿಬ್ಬಂದಿಯಲ್ಲಿ ಕೂಡ ಸೋಂಕು ಕಂಡು ಬಂದಿದೆ. ತುಮಕೂರು ತಾಲೂಕಿನಲ್ಲಿ 36, ತಿಪಟೂರು ತಾಲೂಕಿನಲ್ಲಿ 21, ಶಿರಾ ತಾಲೂಕಿನಲ್ಲಿ 24, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 17, ಕುಣಿಗಲ್ ತಾಲೂಕಿನಲ್ಲಿ 13, ಪಾವಗಡ ಮತ್ತು ತುರುವೇಕೆರೆ ತಾಲೂಕಿನಲ್ಲಿ ತಲಾ 7, ಕೊರಟಗೆರೆ ತಾಲೂಕಿನಲ್ಲಿ 3, ಮಧುಗಿರಿ ತಾಲೂಕಿನಲ್ಲಿ 6 ಮತ್ತು ಗುಬ್ಬಿ ತಾಲೂಕಿನಲ್ಲಿ ಓರ್ವರಿಗೆ ಸೋಂಕು ತಗುಲಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.