ತುಮಕೂರು:ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮ ಸರ್ಕಾರದ ನಿರ್ದೇಶನದಂತೆ ಜುಲೈ 31 ರವರೆಗೆ ಜಾರಿಯಾಗಿದ್ದ ಲಾಕ್ಡೌನ್ ತೆರವುಗೊಳಿಸಿದ್ದು ತುಮಕೂರು ನಗರ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದೆ.
ಆ.17 ರಿಂದ ತುಮಕೂರು ನಗರದಲ್ಲಿ ನಗರ ಸಾರಿಗೆ ಬಸ್ ಸಂಚಾರ ಆರಂಭ - ನಗರ ಸಾರಿಗೆ ಬಸ್ಸುಗಳ ಸಂಚಾರ
ಲಾಕ್ಡೌನ್ ತೆರವುಗೊಳಿಸಿರುವ ಕಾರಣ ತುಮಕೂರು ನಗರ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್ಸುಗಳು ಆಗಸ್ಟ್ 17ರಿಂದ ಸಂಚಾರ ನಡೆಸಲಿವೆ.
ತುಮಕೂರು ನಗರದಲ್ಲಿ ನಗರ ಸಾರಿಗೆ ಬಸ್ಸುಗಳ ಸಂಚಾರ
ಆಗಸ್ಟ್ 17 ರಿಂದ ತುಮಕೂರು ಬಸ್ ನಿಲ್ದಾಣದಿಂದ ಸಿದ್ದಗಂಗಾ ಮಠ- ಹೆಗ್ಗೆರೆ, ಶೆಟ್ಟಿಹಳ್ಳಿ- ಯಲ್ಲಾಪುರ, ಗೂಳರಿವೆ- ಯಲ್ಲಾಪುರ, ಮೇಳೆಕೋಟೆ- ಬೆಳಗುಂಬ, ಊರುಕೆರೆ- ಮರಳೂರು ದಿಣ್ಣೆ ನಡುವೆ ನಗರ ಸಾರಿಗೆ ಬಸ್ಗಳು ಸಂಚರಿಸಲಿವೆ.
ಪ್ರತಿ ಅರ್ಧ ಗಂಟೆಗೊಮ್ಮೆ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆವರೆಗೆ ಬಸ್ಸುಗಳು ಓಡಾಡಲಿ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.