ತುಮಕೂರು:ಹುಳಿಯಾರು ನಾಡ ಕಚೇರಿಯಲ್ಲಿ ವಂಶ ವೃಕ್ಷ, ಮರಣ ದೃಢೀಕರಣ ಪತ್ರ ನಕಲಿಯಾಗಿ ಸೃಷ್ಟಿಸಿ ತಿಮ್ಮಕ್ಕ ಎಂಬುವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಉಪ ತಹಶೀಲ್ದಾರ್ ಪುಷ್ಪವತಿ, ಗ್ರಾಮ ಲೆಕ್ಕಿಗ ಮಂಜುನಾಥ್ ಹೆಚ್. ಹೆಚ್, ಕಂದಾಯಧಿಕಾರಿ ಮಂಜುನಾಥ್ ಹೆಚ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ನಾಡ ಕಚೇರಿಯಲ್ಲಿ ನಕಲಿ ವಂಶ ವೃಕ್ಷ, ಮರಣ ದೃಢೀಕರಣ ಪತ್ರ ನೀಡಿದ ಆರೋಪ.. ಅಧಿಕಾರಿಗಳ ವಿರುದ್ಧ ಕೇಸ್
ನಾಡ ಕಚೇರಿಯಲ್ಲಿ ವಂಶ ವೃಕ್ಷ, ಮರಣ ದೃಢೀಕರಣ ಪತ್ರ ನಕಲಿ-ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪ-ಉಪ ತಹಶೀಲ್ದಾರ್, ಗ್ರಾಮ ಲೆಕ್ಕಿಗ ಹಾಗೂ ಕಂದಾಯಧಿಕಾರಿ ವಿರುದ್ಧ ಪ್ರಕರಣ
ತುಮಕೂರು ಹುಳಿಯಾರು ನಾಡ ಕಚೇರಿ
ಅಧಿಕಾರಿಗಳ ವಿರುದ್ಧ ಕೇರಿರಂಗಪ್ಪ ಎಂಬುವರು ದೂರು ನೀಡಿದ್ದರು. ಮೃತಪಟ್ಟ ತಮ್ಮ ಮಾವನ ಹೆಸರಿನಲ್ಲಿದ್ದ ಖಾತೆಯನ್ನೂ ದಿಢೀರ್ ಇ ಬದಲಾವಣೆ ಮಾಡಲಾಗಿತ್ತು. ಕೇರಿರಂಗಪ್ಪ ಅವರ ಮಾವನ ಹೆಸರಿನಲ್ಲಿದ್ದ 4 ಎಕರೆ ಜಮೀನನ್ನ ಅಧಿಕಾರಿಗಳು ನಕಲಿ ಮಾಡಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಮಳೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿಸಿಗಳಿಗೆ ಸೂಚನೆ ನೀಡಿದ್ದೇನೆ: ಸಿಎಂ