ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ ದಾಖಲು ತುಮಕೂರು:ಪ್ರಚೋದನಾಕಾರಿ ಭಾಷಣ ಮಾಡಿದ್ದ ಆರೋಪದಡಿ ಶರಣ್ ಪಂಪವೆಲ್ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶರಣ್ಇ ಪಂಪ್‌ವೆಲ್ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿ. ಇದೀಗ ತುಮಕೂರು ನಗರದ ಬಾರ್ಲೈನ್ ನಿವಾಸಿ ಸೈಯದ್ ಬುರ್ಹಾನ್ ಉದ್ದೀನ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಜನವರಿ 28ರಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ತುಮಕೂರು ನಗರದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶರಣ್ ಪಂಪ್‌ವೆಲ್ ಸಾರ್ವಜನಿಕ ವೇದಿಕೆಯಲ್ಲಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು. ತುಮಕೂರು ಜಿಲ್ಲೆಯನ್ನು ಹಿಂದುತ್ವದ ಫ್ಯಾಕ್ಟರಿ ಮಾಡ್ತೀವಿ, ಗುಜರಾತ್ ಹತ್ಯಾಕಾಂಡವನ್ನು ಹಿಂದೂ ಸಂಘಟನೆಯ ಪರಾಕ್ರಮ ಎಂದು ಹೇಳಿದ್ದರು. ಇದನ್ನು ಉಲ್ಲೇಖಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ದೂರುದಾರ ಸೈಯದ್ ಬುರ್ಹಾನ್ ಉದ್ದೀನ್ ಮಾತನಾಡಿ, "ಗುಜರಾತ್ನಲ್ಲಿ 2,000 ಜನರನ್ನು ಸಾಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಎದುರಾದರೆ ನುಗ್ಗಿ ಹೊಡೆಯುತ್ತೇವೆ ಎಂದು ಶರಣ್ ಪಂಪ್‌ವೆಲ್ ಹೇಳಿದ್ದಾರೆ. ಇದರ ಅರ್ಥವೇನು?. ಈತ ಯಾರು? ನಮ್ಮ ತುಮಕೂರಿಗೆ ಬಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಇಂತಹ ಹೇಳಿಕೆಗಳನ್ನು ಓಪನ್ ಆಗಿ ಕೊಡುತ್ತಾನೆ. ತಲ್ವಾರ್ ತೆಗೆದುಕೊಂಡು ನುಗ್ಗಿ ಹೊಡೆಯುತ್ತೇವೆ ಅಂದರೆ ಏನು?. ಶಾಂತಿಯ ಊರು ನಮ್ಮ ತುಮಕೂರು. ಶಾಂತಿ-ಸೌಹಾರ್ದತೆಗೆ ನಮ್ಮ ಊರು ದೇಶದಲ್ಲಿಯೇ ಹೆಸರು ಮಾಡಿದೆ. ಈ ಜಿಲ್ಲೆಗೆ ಹೆಸರು ತರುವಲ್ಲಿ ನಮ್ಮ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ತುಂಬಾ ಶ್ರಮಪಟ್ಟಿದ್ದಾರೆ. ನಮ್ಮ ಮುರ್ತುಜಾ ಭಾಷಾ ಖಾದ್ರಿರಂತಹ ಸಾಧು-ಸಂತರು ಶಾಂತಿಯ ಸಂದೇಶ ಕೊಟ್ಟಿದ್ದಾರೆ" ಎಂದರು.
ಇದನ್ನೂ ಓದಿ:ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ಘಟನೆ ನಡೆದಿದೆ ಎಂದ ಶರಣ್: ಪಂಪ್‌ವೆಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ಫಾಜಿಲ್ ತಂದೆ