ತುಮಕೂರು :ವ್ಯಕ್ತಿಯೋರ್ವ ತನಗೆ ಅದೃಷ್ಟ ಒಲಿಯಲಿದೆ ಎಂದು ನಂಬಿ ನರಿಯೊಂದನ್ನು ತಂದು ತನ್ನ ಮನೆಯಲ್ಲಿ ಸಾಕಿದ್ದ. ಇದೀಗ ಈ ವ್ಯಕ್ತಿಯನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು ನರಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದಲ್ಲಿ ನಡೆದಿದೆ.
ಪ್ರತಿದಿನ ಬೆಳಗ್ಗೆ ಎದ್ದು ನರಿ ಮುಖ ನೋಡುವ ಮೂಲಕ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿ ಸಾಕಿದ್ದಾನೆ ಎನ್ನಲಾಗಿದೆ. ನಾಗವಲ್ಲಿ ಗ್ರಾಮದ ಬಳಿ ಇರುವ ಕೋಳಿ ಫಾರಂ ನಡೆಸುವ ಲಕ್ಷ್ಮಿಕಾಂತ ಎಂಬಾತನೇ ಬಂಧಿತ ಆರೋಪಿ. ನರಿ ರಕ್ಷಿಸಿರುವ ಅರಣ್ಯ ಇಲಾಖೆ, ಸಂಚಾರಿ ದಳದ ಅಧಿಕಾರಿಗಳು ಅದನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಆರೋಪಿ ಏಳು ತಿಂಗಳ ಮರಿಯೊಂದನ್ನು ಗ್ರಾಮದ ಕೆರೆ ಬಳಿಯಿಂದ ಕರೆತಂದು ತನ್ನ ಕೋಳಿ ಫಾರಂನಲ್ಲಿ ಸಾಕುತ್ತಿದ್ದ.