ತುಮಕೂರು:ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಶಾಲಾ ಶಿಕ್ಷಕರೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚನ್ನನಕುಂಟೆ ಗ್ರಾಮದಲ್ಲಿ ನಡೆದಿದೆ. ಆರೀಫ್ ಉಲ್ಲಾ (55) ಎಂಬುವವರೇ ಮೃತ ಶಿಕ್ಷಕ.
ತುಮಕೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಶಿಕ್ಷಕ ಸಾವು - ತುಮಕೂರಿನಲ್ಲಿ ಕೊಚ್ಚಿಕೊಂಡು ಹೋಗಿ ಶಾಲಾ ಶಿಕ್ಷಕ ಸಾವು
ಶಾಲೆ ಮುಗಿಸಿಕೊಂಡು ಬೈಕ್ನಲ್ಲಿ ಬರುತ್ತಿದ್ದಾಗ ಶಿಕ್ಷಕರೊಬ್ಬರು ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜರುಗಿದೆ.
ತುಮಕೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಶಿಕ್ಷಕ ಸಾವು
ಶಿರಾ ತಾಲೂಕಿನ ದಾವತ್ ಪಾಳ್ಯ ಗ್ರಾಮದಿಂದ ಶಿಕ್ಷಕ ಆರೀಫ್ ಶಾಲೆ ಮುಗಿಸಿಕೊಂಡು ಬೈಕ್ನಲ್ಲಿ ವಾಪಸ್ ಶಿರಾ ನಗರಕ್ಕೆ ಬರುತ್ತಿದ್ದರು. ರಸ್ತೆಯಲ್ಲಿರುವ ಹಳ್ಳ ದಾಟುವ ಸಮಯದಲ್ಲಿ ಬೈಕ್ನೊಂದಿಗೆ ಆಯತಪ್ಪಿ ಬಿದ್ದಿರುವ ಶಿಕ್ಷಕ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮೃತದೇಹ ಸುಮಾರು ಐವತ್ತು ಮೀಟರ್ ದೂರದ ಸೀಮೆ ಜಾಲಿ ಗಿಡಗಳ ಮಧ್ಯೆ ಪತ್ತೆಯಾಗಿದೆ. ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಭಟ್ಕಳದಲ್ಲಿ ಮನೆ ಮೇಲೆ ಕುಸಿದ ಗುಡ್ಡ; ಒಂದೇ ಕುಟುಂಬದ ನಾಲ್ವರು ಸಾವು