ತುಮಕೂರು:ಇಂದು ಶ್ರಾವಣ ಮಾಸದ ಕೊನೆ ಶನಿವಾರ ಆದ ಕಾರಣ ನಗರದ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೂ ವಿಶೇಷ ಪೂಜೆ, ಹೋಮ ನಡೆಸಲಾಯಿತು.
ಶ್ರಾವಣ ಮಾಸ ಕೊನೆ ಶನಿವಾರದ ವಿಶೇಷ ಪೂಜೆ - ಶನೇಶ್ವರ ದೇವಾಲಯ
ಶ್ರಾವಣ ಮಾಸದಲ್ಲಿ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ, ಪುರಸ್ಕಾರಗಳು ನಡೆಯುತ್ತವೆ. ಅದರಂತೆ ಭಕ್ತರು ಸಹ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ಇಂದು ಶ್ರಾವಣ ಮಾಸದ ಕೊನೆ ಶನಿವಾರ ಆದ ಕಾರಣ ತುಮಕೂರು ನಗರದ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೂ ವಿಶೇಷ ಪೂಜೆ, ಹೋಮ ನಡೆಸಲಾಯಿತು.
ಶ್ರಾವಣ ಮಾಸದಲ್ಲಿ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ, ಪುರಸ್ಕಾರಗಳು ನಡೆಯುತ್ತವೆ. ಅದರಂತೆ ಭಕ್ತರು ಸಹ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ಭಕ್ತರು ತಮ್ಮ ಬೇಡಿಕೆಗಳನ್ನು ದೇವರಲ್ಲಿ ನಿವೇದಿಸಿಕೊಂಡರೆ ಶೀಘ್ರವಾಗಿ ಪರಿಹರಿಸುತ್ತಾನೆಂಬ ನಂಬಿಕೆ ಇರುವುದರಿಂದ ಭಕ್ತರು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸುವುದು ಸಾಮಾನ್ಯವಾಗಿದೆ.
ಅದೇ ರೀತಿ ನಗರದ ಗಾರ್ಡನ್ ರಸ್ತೆಯ ಬಳಿಯಿರುವ ಇರುವ ಶನೇಶ್ವರ ದೇವಾಲಯದಲ್ಲಿ ಇಂದು ಬೆಳಗ್ಗಯಿಂದಲೂ ವಿಶೇಷ ಹೋಮ ನಡೆಸಲಾಯಿತು. ಜೊತೆಗೆ ಶ್ರೀ ವೆಂಕಟೇಶ್ವರ, ರಾಮ ಹಾಗೂ ಹನುಮಂತನ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೂ ವಿಶೇಷ ಪೂಜೆಗಳು ನಡೆದವು.