ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ತಾಯಿ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಬೇಗೂರು ಬೈಪಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ.
ಕಾರು ಪಲ್ಟಿ: ತಾಯಿ ಮಗ ಸಾವು, ಐವರಿಗೆ ಗಾಯ - kannadanews
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ತಾಯಿ ಮಗ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.
ಕಾರು ಪಲ್ಟಿಯಾಗಿ ತಾಯಿ ಮಗ ದಾರುಣ ಸಾವು
ಮಾಗಡಿ ತಾಲೂಕಿನ ವಾಸಿಯಾದ ಅಮೃತ(35), ಇವರ ಪುತ್ರ ಪ್ರೀತಂ(7) ಮೃತರು. ಬೆಳಗ್ಗೆ ಹಾಸನಕ್ಕೆ ಹೋಗುವಾಗ ಕುಣಿಗಲ್ ತಾಲೂಕಿನ ಬೇಗೂರು ಬೈಪಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.ಇಬ್ಬರು ಮೃತಪಟ್ಟು ಉಳಿದ ಐದು ಮಂದಿ ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ಕುಣಿಗಲ್ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.