ತುಮಕೂರು: ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್‌ಗಳನ್ನು ಪೊಲೀಸರು ಮತ್ತು ಚುನಾವಣಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಬೀಗುವ 'ಪ್ರೆಶರ್': ಮತದಾರರಿಗೆ ಹಂಚಲು ತಂದ 120 ಕುಕ್ಕರ್ ವಶ - 120 cooker siezed in tumkur news
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 120 ಪ್ರೆಶರ್ ಕುಕ್ಕರ್‌ಗಳನ್ನು ತುಮಕೂರಿನ ಕುಣಿಗಲ್ ತಾಲೂಕಿನ ಪಡುವಗೆರೆ ಗ್ರಾಮ ಪಂಚಾಯಿತಿಯ ಪಡುವಗೆರೆ ಬ್ಲಾಕ್ನಲ್ಲಿ ವಶಪಡಿಸಿಕೊಳ್ಳಲಾಗಿದೆ.
120 ಕುಕ್ಕರ್ ಜಪ್ತಿ
ಕುಣಿಗಲ್ ತಾಲೂಕಿನ ಪಡುವಗೆರೆ ಗ್ರಾಮ ಪಂಚಾಯಿತಿಯ ಪಡುವಗೆರೆ ಬ್ಲಾಕ್ನಲ್ಲಿ ಮತದಾರರಿಗೆ ಹಂಚಲು 120 ಕುಕ್ಕರ್‌ಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈಗಾಗಲೇ ಮತದಾರರಿಗೆ 30 ಕುಕ್ಕರ್‌ಗಳನ್ನು ಹಂಚಿದ ಆರೋಪವೂ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ ಎಂಬಾತನನ್ನು ಕುಣಿಗಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.