ಚಾಮರಾಜನಗರ:ಹೊಳೆಯಲ್ಲಿ ಸ್ನಾನ ಮಾಡುವಾಗ ಪವರ್ ಲೈನ್ ತುಂಡಾಗಿ ಬಿದ್ದು ತಾಯಿ-ಮಗಳು ಮೃತಪಟ್ಟಿರುವ ಧಾರುಣ ಘಟನೆ ತಾಲೂಕಿನ ಹೆಬ್ಬಸೂರಿನ ಸುವರ್ಣಾವತಿ ಹೊಳೆಯಲ್ಲಿ ನಡೆದಿದೆ.
ಹೊಳೆಯಲ್ಲಿ ಸ್ನಾನ ಮಾಡುವಾಗ ವಿದ್ಯುತ್ ಶಾಕ್: ತಾಯಿ-ಮಗಳ ದುರ್ಮರಣ - ತಾಯಿ-ಮಗಳು
ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದ್ದರಿಂದ ವಿದ್ಯುತ್ ಪ್ರಹರಿಸಿ ತಾಯಿ-ಮಗಳು ಮೃತಪಟ್ಟಿರುವ ಧಾರುಣ ಘಟನೆ ಸುವರ್ಣಾವತಿ ಹೊಳೆಯಲ್ಲಿ ನಡೆದಿದೆ.
ಚಾಮರಾಜನಗರ
ಹೆಬ್ಬಸೂರಿನ ಮಂಜುಳ(೪೦) ಹಾಗೂ ಯಶಶ್ರೀ(೧೦) ಮೃತರು. ಮತ್ತೋರ್ವ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದ್ದರಿಂದ ವಿದ್ಯುತ್ ಪ್ರಹರಿಸಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಮೃತ ದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Apr 12, 2019, 4:51 PM IST