ಕರ್ನಾಟಕ

karnataka

By

Published : Sep 3, 2020, 10:08 AM IST

ETV Bharat / state

ರಾಜಾಹುಲಿ ಎನಿಸಿಕೊಂಡ ನೀವು ಪ್ರಧಾನಿ ಎದುರು ಪೇಪರ್ ಹುಲಿ ಆಗಬೇಡಿ: ಸಿಎಂಗೆ ದಿನೇಶ್ ಗುಂಡೂರಾವ್​ ಸಲಹೆ

ಕೇಂದ್ರ ಸರ್ಕಾರದ ಬಳಿ ರಾಜ್ಯದ ಪಾಲಿನ ಜಿಎಸ್​​​ಟಿ ಮೊತ್ತವನ್ನು ಕೇಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಗುಂಡೂರಾವ್
ಗುಂಡೂರಾವ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್ ಮೂಲಕ ತೀವ್ರ ಆಕ್ರೋಶ ಹೊರ ಹಾಕಿರುವ ಅವರು, ಬಿಎಸ್​​ವೈ ಅವರೇ ನೀವು ರಾಜಾಹುಲಿ ಎಂದು ಕರೆಸಿಕೊಂಡವರು. ಈಗ ಮೋದಿಯವರ ಮುಂದೆ ಪೇಪರ್ ಹುಲಿ ಆಗಬೇಡಿ. ಆದಾಯ ಸರಿದೂಗಿಸಲು ಜಿಎಸ್​​ಟಿ ಪಾಲನ್ನು ಕೇಳಿ ಎಂದು ಒತ್ತಾಯಿಸಿದ್ದಾರೆ.

ನಾವು ಯಾಕೆ ಆರ್​ಬಿಐನಿಂದ ಸಾಲ ಪಡೆಯಬೇಕು?, ತೆರಿಗೆ ಪಾಲು ಕೇಳುವುದು ನಮ್ಮ ಹಕ್ಕು. ಆ ಹಕ್ಕನ್ನು ಕೇಳದಷ್ಟು ನಾಲಿಗೆ ಬಿದ್ದು ಹೋಯ್ತೆ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

ಗುಂಡೂರಾವ್ ಟ್ವೀಟ್

ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್​​​ಟಿ ಮೊತ್ತವನ್ನು ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವೇ ಬೇಕಾದರೆ ಆರ್​ಬಿಐ ಬಳಿ ಸಾಲ ಮಾಡಲಿ ಎಂದು ತಿಳಿಸಿದ್ದಾರೆ. ಆಗಿನಿಂದಲೂ ಕಾಂಗ್ರೆಸ್ ನಾಯಕರು, ಕೇಂದ್ರದ ವಿರುದ್ಧ ಧ್ವನಿ ಎತ್ತುವಂತೆ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಟ್ವಿಟರ್ ಮೂಲಕ ಬಹಿರಂಗ ಹೇಳಿಕೆಗಳನ್ನು ನೀಡುವ ಜೊತೆಗೆ ನೇರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಜಿಎಸ್​​ಟಿ ಪಾಲನ್ನು ಕೇಳುವಂತೆ ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details