ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಬಜೆಟ್ ಮೇಲೆ ಶಿವಮೊಗ್ಗ ಜಿಲ್ಲೆಯ ನಿರೀಕ್ಷೆಗಳೇನು..? - ಕೈಗಾರಿಕಾ ವಸಾಹತ್ತಿಗೆ ಮೂಲಭೂತ ಸೌಕರ್ಯ

ಸರ್ಕಾರ ಆಯಾ ಜಿಲ್ಲೆಯ ರೈತರಿಂದಲೇ ಭತ್ತ ಖರೀದಿ ಮಾಡಬೇಕು ಎಂದು ರೈತ ಸತೀಶ್​ ಹೆಚ್​ ಬಿ ಅವರು ಹೇಳಿದ್ದಾರೆ.

ಕೈಗಾರಿಕೋದ್ಯಮಿ ವಿಶ್ವಾಸ್ ಕಾಮತ್
ಕೈಗಾರಿಕೋದ್ಯಮಿ ವಿಶ್ವಾಸ್ ಕಾಮತ್

By

Published : Jul 6, 2023, 10:50 PM IST

ಕೈಗಾರಿಕೋದ್ಯಮಿ ವಿಶ್ವಾಸ್ ಕಾಮತ್

ಶಿವಮೊಗ್ಗ:ಈಗಾಗಲೇ ಹಲವು ಪ್ರಸಿದ್ದ ಬಜೆಟ್​ಗಳನ್ನು ಮಂಡಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ರಾಜ್ಯದ ಬಜೆಟ್ ಅನ್ನು ಮಂಡಿಸಲಿದ್ದಾರೆ. ನಾಳಿನ ಬಜೆಟ್ ಮೇಲೆ ರಾಜ್ಯದ ವಿವಿಧ ಸಂಘಟನೆಗಳು, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಂತೆ ಶಿವಮೊಗ್ಗ ಜಿಲ್ಲೆಯ ರೈತರ, ಸಂಘ ಸಂಸ್ಥೆಗಳ, ಕೈಗಾರಿಕೋದ್ಯಮಿಗಳ ನಿರೀಕ್ಷೆಗಳು ಇಂತಿವೆ:

ರಾಜ್ಯ ಬಜೆಟ್ ಬಗ್ಗೆ ತುಂಬಾ ನಿರೀಕ್ಷೆ ಇದೆ. ಮೊದಲನೆಯದಾಗಿ ಮೂರು ಕೃಷಿಗೆ ಮಾರಕವಾದ ಕಾಯಿದೆಯನ್ನು ವಾಪಸ್ ಪಡೆಯಬೇಕು. ಈಗ ಮೊದಲ ಎರಡು ಕಾಯಿದೆಯನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಇನ್ನೊಂದು ಭೂ ಸುಧಾರಣಾ ಕಾಯಿದೆಯನ್ನು ವಾಪಸ್ ಪಡೆಯಬೇಕಿದೆ. ಎಂಎಸ್​ಪಿಯನ್ನು ಜಾರಿ ಮಾಡಬೇಕಿದೆ. ಪಡಿತರ ಚೀಟಿದಾರರಿಗೆ ನೀಡುವ ಅಕ್ಕಿಯನ್ನು ಬೇರೆ ರಾಜ್ಯದವರ ಬಳಿ ಖರೀದಿ ಮಾಡುವ ಬದಲಾಗಿ, ನಮ್ಮ ರಾಜ್ಯದ ರೈತರ ಬಳಿಯೇ ಭತ್ತ ರಾಗಿ, ಜೋಳ ಖರೀದಿ ಮಾಡಬೇಕು.

ಎಂಎಸ್​ಪಿಯ ಬದಲಾಗಿ, ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆದಾಗ ನೇಮಕ ಮಾಡಿದ್ದ ಪ್ರಕಾಶ್ ಕಮ್ಮರಡಿ ಅವರ ಸಮಿತಿ ವರದಿಯಂತೆ ಖರೀದಿ ಮಾಡಬೇಕು ಎಂದರು. ತೆಂಗಿನ ಕಾಯಿ ಬೆಲೆ ಕುಸಿತವಾಗಿದೆ. ಇದರಿಂದ ಸರ್ಕಾರ ತೆಂಗು ಬೆಳೆಗಾರರಿಂದ ತೆಂಗನ್ನು‌ ಖರೀದಿ ಮಾಡಿ, ಪಡಿತರ ವ್ಯವಸ್ಥೆಯಡಿ ಅದನ್ನು ಮಾರಾಟ ಮಾಡಬೇಕು. ಈಗ ಅಕ್ಕಿ, ರಾಗಿ, ಜೋಳ ನೀಡಿದಂತೆ ತೆಂಗಿ‌ನ ಕಾಯಿ ನೀಡಬೇಕು ಎಂದರು.

ಪರಿಹಾರದ ಮೊತ್ತವನ್ನು ನಾಲ್ಕುರಷ್ಟು‌ ನೀಡಬೇಕಿದೆ: ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ನೀಡು ಅನಾಧಿ ಕಾಲದ ಪರಿಹಾರವನ್ನು ಬದಲಾವಣೆ ಮಾಡಬೇಕು.‌ ಇದರಿಂದ ಈಗಿನ ಕಾಲಕ್ಕೆ ಅನುಕೂಲಕರವಾಗಲಿದೆ ಎಂದರು. ಅಲ್ಲದೇ ಪರಿಹಾರದ ಮೊತ್ತವನ್ನು ನಾಲ್ಕುರಷ್ಟು‌ ನೀಡಬೇಕಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್ ಎಸ್ ಬಸವರಾಜಪ್ಪ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ವಾಡಿಕೆಕ್ಕಿಂತ ಕಡಿಮೆ ಅಂದ್ರೆ ಶೇ‌10 ರಷ್ಟು ಮಾತ್ರ ಮಳೆಯಾಗಿದೆ. ನಮ್ಮ ರೈತ ಬಿತ್ತನೆ ಸೇರಿದಂತೆ ನಾಟಿಗೆ ಸೇರಿದಂತೆ ಬೆಳೆ ಬೆಳೆಯಲು ಯಾವುದೇ ಸಿದ್ದತೆ ನಡೆಸಿಲ್ಲ. ಈಗ ಸಮಯ ಮೀರಿದೆ. ಈಗ ಬಿತ್ತನೆ ಮಾಡಿದರೆ, ನಮಗೆ ಬೆಳೆ ಸರಿಯಾಗಿ ಬರಲ್ಲ. ಕಾರಣ ಈಗ ಬಿತ್ತನೆ ಮಾಡಿದರೆ ಮುಂದೆ ಚಳಿಗಾಲ ಬಂದ್ರೆ, ನಮಗೆ ಬೆಳೆ ಸರಿಯಾಗಿ ಸಿಗಲ್ಲ. ಮಳೆ ಕೊರತೆ ಇದೆ. ಸರ್ಕಾರ ರೈತರ ನೆರವಿಗೆ ಆಗಮಿಸಿ, ರೈತರ ಬೆನ್ನು ತಟ್ಟುವ ಕೆಲಸ ಮಾಡಬೇಕು ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಪ್ರೇಮ

ಸರ್ಕಾರ ರೈತರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ: ಸರ್ಕಾರ ಐದು ಗ್ಯಾರಂಟಿಯಲ್ಲೆ ಮುಳುಗಿ ಹೋಗಿದೆ. ಸರ್ಕಾರ ಐದು ಗ್ಯಾರಂಟಿ ಬಿಟ್ಟರೆ ಬೇರೆ ಇಲ್ಲವೇನೂ ಎಂಬಂತೆ ಇದೆ. ರೈತರ ಬಗ್ಗೆ ಗಮನ ಹರಿಸುತ್ತಿಲ್ಲ. ಆಹಾರದ ಕೊರತೆ ಉಂಟಾಗಿದೆ. ಸರ್ಕಾರ ಆಯಾ ಜಿಲ್ಲೆಯ ರೈತರಿಂದಲೇ ಭತ್ತವನ್ನು ಖರೀದಿ‌ ಮಾಡಬೇಕು ಎಂದರು. ಆದರೆ, ಸರ್ಕಾರ ರೈತರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ ಎಂದು ರೈತ ಸತೀಶ್ ಹೆಚ್ ಬಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾಳಿನ ಬಜೆಟ್ ನಲ್ಲಿ ಶಿವಮೊಗ್ಗ ಜಿಲ್ಲೆ ಚೇಂಬರ್ ಆಪ್ ಕಾಮರ್ಸ್ ಬಹಳಷ್ಟು‌ ನೀರಿಕ್ಷೆಯನ್ನು ಹೊಂದಿದೆ. ಇತ್ತಿಚೇಗೆ ಏರಿಸಲ್ಪಟ್ಟ ವಿದ್ಯುತ್ ದರವನ್ನು ಕಡಿಮೆ ಮಾಡಬೇಕು. ವಿದ್ಯುತ್ ದರದಲ್ಲಿ ಎಂಎಸ್​ಎಂಇ ವಿಭಾಗಗಳಿಗೆ ರಿಯಾಯತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲಿ ಶೇ 9 ರಷ್ಟು ಇರುವ ತೆರಿಗೆಯನ್ನು ಶೇ‌ 3 ಕ್ಕೆ ಇಳಿಸಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಜೋಗ ಹೊರತು ಪಡಿಸಿದರೆ ಉಳಿದ ಕಡೆ ಅಷ್ಟೊಂದು ಆದ್ಯತೆ ನೀಡಿಲ್ಲ. ಜಿಲ್ಲೆಯಲ್ಲಿ 85 ಪ್ರವಾಸಿ ಕೇಂದ್ರಗಳಿವೆ. ಅವುಗಳನ್ನು ಅಭಿವೃದ್ದಿಪಡಿಸಬೇಕಿದೆ. ಅವುಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಒದಗಿಸಬೇಕಿದೆ.

ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ

ಶಿವಮೊಗ್ಗ ನಗರದಲ್ಲಿ ಟ್ರಕ್ ಟರ್ಮಿನಲ್ ಮಾಡಬೇಕು: ಜಿಲ್ಲೆಗೆ ವಿಮಾನ ನಿಲ್ದಾಣ ಬಂದಿದೆ. ಶಿವಮೊಗ್ಗದಿಂದ‌ ಹರಿಹರಕ್ಕೆ ಚುತುಷ್ಪಥ ರಸ್ತೆ ಅಭಿವೃದ್ದಿ ಪಡಿಸಿದರೆ, ಉತ್ತರ ಕರ್ನಾಟಕ್ಕೆ ಸಂಪರ್ಕ ಸಾಧ್ಯವಾಗುತ್ತದೆ. ಶಿವಮೊಗ್ಗ ನಗರದಲ್ಲಿ ಟ್ರಕ್ ಟರ್ಮಿನಲ್ ಮಾಡಬೇಕು. ಟ್ರಕ್ ಟರ್ಮಿನಲ್ ಗೆ ಹೊಂದಿಕೊಂಡಂತೆ ಆಟೋ‌ ಕಾಂಪ್ಲಕ್ಸ್ ಮಾಡಬೇಕು ಎಂದರು. ಜಿಲ್ಲೆಯಲ್ಲಿನ ಆಟೋ ಮೊಬೈಲ್ ನ ಜಿಎಸ್ ಟಿ ದರವನ್ನು ಕಡಿಮೆ ಮಾಡಬೇಕು. ವ್ಯಾಪಾರ ಪರವಾನಗಿಯನ್ನು ಐದು ವರ್ಷಕ್ಕೊಮ್ಮೆ ಮಾಡದೆ, ಒಂದೇ ಸಲ ಪರವಾನಿಗೆಯನ್ನು ತೆಗೆದುಕೊಳ್ಳುವಂತೆ ಮಾಡಬೇಕು ಎಂದು ಚೇಂಬರ್ ಆಫ್‌ ಕಾಮರ್ಸ್ ನ ಪ್ರಧಾನ ಕಾರ್ಯದರ್ಶಿ ವಸಂತ ಹೋಬಳಿದಾರ್ ರಾಜ್ಯ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.

ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರಾದ ಪ್ರಿಯಾಂಕಾ ಗಾಂಧಿ ಅವರು ಚುನಾವಣೆಗೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರಿಗೆ ಆರನೇ ಗ್ಯಾರಂಟಿ ಎಂದು ನಮ್ಮ ವೇತನ 15 ಸಾವಿರ ಎಂದು ಘೋಷಣೆ ಮಾಡಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಾರಿ ಮಾಡಲಾಗುವುದು ಎಂದು ಹೇಳಿದ್ರು. ಅದನ್ನು ಜಾರಿ ಮಾಡಬೇಕು. ಈಗ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ತಿಂಗಳು ಆಗಿದೆ. ನಾಳಿನ ಬಜೆಟ್​ನಲ್ಲಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ದಯವಿಟ್ಟು ಬಜೆಟ್ ನಲ್ಲಿ ಸಂಬಳ‌‌ ಹೆಚ್ಚಿಸುವ ಬಗ್ಗೆ ಗಮನ ಹರಿಸಬೇಕೆಂದರು.

ನಾವೇನು ಜಾಸ್ತಿ ಮಾಡಿ ಎಂದು ಅವರನ್ನು ಕೇಳಿರಲಿಲ್ಲ. ಈಗ ಅವರೆ ಹನ್ನೂಂದೂವರೆ ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸುವುದಾಗಿ ಹೇಳಿದ್ದಾರೆ. ಈಗ ಅದರಂತೆ ನಮಗೆ ವೇತನ ನೀಡಬೇಕು. ಸರ್ಕಾರಕ್ಕೆ ನಾವೆಲ್ಲಾ ಮನವಿ ಸಲ್ಲಿಸಿದಾಗ ಇಲ್ಲ‌ ಗ್ಯಾರಂಟಿ ಪೂರೈಸಿದ ಮೇಲೆ ನೀಡುವುದಾಗಿ ಹೇಳಿದ್ದಾರೆ. ಬಜೆಟ್ ಮುಗಿದ‌‌ ಮೇಲೆ ಅಂದ್ರೆ ಅದು ಆಗದ ಕೆಲಸವಾಗಿದೆ. ಆದ್ದರಿಂದ ನಮಗೆ ಇದೇ ಬಜೆಟ್​ನಲ್ಲಿ ಘೋಷಣೆ ಮಾಡಬೇಕು‌ ಎಂದರು.

ರಾಜ್ಯದಲ್ಲಿ‌ 65 ಸಾವಿರ ಅಂಗನವಾಡಿ ಕಾರ್ಯಕರ್ತೆಯರು, 65 ಸಾವಿರ ಸಹಾಯಕರು ಇದ್ದಾರೆ. ಇದರಿಂದ ಇದು ರಾಜ್ಯ ಸರ್ಕಾರಕ್ಕೆ ಹೊರೆ ಆಗಲ್ಲ. ನಾವು ಸಹ ರಾಜ್ಯ ಸರ್ಕಾರ ಹೇಳಿದ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇವೆ. ಮಿನಿ ಅಂಗನವಾಡಿಗಳು‌‌‌‌ ಮೇಲ್ದರ್ಜೆಗೆ ಏರಿಸಲಾಗಿದೆ. ಅವುಗಳನ್ನು ಬೇಗನೆ ಜಾರಿ ಮಾಡಬೇಕು.

ಈಗಲೂ ಸಹ ನಾವು ಟಿಎಡಿಎ ಹಳೆಯ ದರವೇ ಇದೆ. ಪ್ರತಿ‌‌ ಮೀಟಿಂಗ್ ಕೇವಲ 30 ರೂ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಬೇಕು. ಅಂಗನವಾಡಿಗಳನ್ನು ಅದಷ್ಟು ಸ್ವಂತ ಕಟ್ಟಡಗಳಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಕನಿಷ್ಟ ಮೂಲಭೂತ ಸೌಕರ್ಯ ಇರುವಂತೆ ಮಾಡಬೇಕು.ಬಾಡಿಗೆ ಕಟ್ಟಡಗಳಿಗೆ ಕಳೆದ ಹಲವು ದಿನಗಳಿಂದ ಬಾಡಿಗೆ ಬಿಡುಗಡೆ ಮಾಡಬೇಕು. ಮೊಟ್ಟೆ ಹಣವನ್ನು ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷರಾದ ಪ್ರೇಮಾ ಅವರು ತಿಳಿಸಿದ್ದಾರೆ.

ಕೈಗಾರಿಕಾ ವಸಾಹತ್ತಿಗೆ ಮೂಲಭೂತ ಸೌಕರ್ಯ:ಈಗಾಗಲೇ ಹಲವಾರು ಬಜೆಟ್ ಅನ್ನು ಸಿದ್ದರಾಮಯ್ಯನವರು‌ ಯಶಸ್ವಿಯಾಗಿ ನೀಡಿದ್ದಾರೆ. ಅದರಂತೆ ನಾಳೆಯು ಉತ್ತಮವಾದ ಬಜೆಟ್ ನೀಡುವ ನಿರೀಕ್ಷೆ ಇದೆ. ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಶಿವಮೊಗ್ಗ ತಾಲೂಕಿನ ಜಕತಿಕೊಪ್ಪದಲ್ಲಿನ ಕೈಗಾರಿಕಾ ವಸಾಹತ್ತಿಗೆ ಮೂಲಭೂತ ಸೌಕರ್ಯ ನೀಡಬೇಕಿದೆ. ಇಲ್ಲಿಗೆ ವಿದ್ಯುತ್, ರಸ್ತೆ ಸಂಪರ್ಕ ಒದಗಿಸಬೇಕಿದೆ. ಈಗ ವಿಮಾನ ನಿಲ್ದಾಣ ಶಿವಮೊಗ್ಗಕ್ಕೆ ಬಂದಿರುವುದರಿಂದ ಜಕತಿಕೊಪ್ಪವನ್ನು ಕೈಗಾರಿಕ ಹಬ್ ಅನ್ನಾಗಿ ಮಾಡುವ ಎಲ್ಲಾ ಅವಕಾಶವಿದೆ. ಇದರಿಂದ ಇದಕ್ಕೆ ಹೆಚ್ಚಿನ ಒತ್ತು‌ ನೀಡಬೇಕಿದೆ. ರಾಜ್ಯದ ಎಲ್ಲ ಕೈಗಾರಿಕೋದ್ಯಮಿಗಳಿಗೆ ರಿಯಾಯತಿ ದರದಲ್ಲಿ ವಿದ್ಯುತ್ ನೀಡಿದ್ರೆ ಅನೇಕ ಉದ್ಯೋಗಾವಕಾಶ ಕಲ್ಪಿಸಿದಂತೆ ಆಗುತ್ತದೆ. ಅಲ್ಲದೆ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚಿನ ಆರ್ಥಿಕ ಅನುಕೂಲ ಮಾಡಿಕೊಡಬೇಕು ಎಂದು ಕೈಗಾರಿಕೋದ್ಯಮಿ ವಿಶ್ವಾಸ್ ಕಾಮತ್ ಆಗ್ರಹಿಸಿದ್ದಾರೆ.‌

ಇದನ್ನೂ ಓದಿ:ರಾಜ್ಯ ಬಜೆಟ್: ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡ ಅವಳಿ‌ ನಗರದ‌ ಮಂದಿ

ABOUT THE AUTHOR

...view details