ಕರ್ನಾಟಕ

karnataka

By

Published : Jul 25, 2019, 11:24 PM IST

ETV Bharat / state

ಅನಧಿಕೃತ ಫ್ಲೆಕ್ಸ್​ ತೆರವುಗೊಳಿಸಿದ ಶಿವಮೊಗ್ಗ ಪಾಲಿಕೆ

ಪಾಲಿಕೆಯಿಂದ ಅನುಮತಿ ಪಡೆಯದೆ ಶಿವಮೊಗ್ಗದಲ್ಲಿ ಅಳವಡಿಸಿದ್ದ ಫ್ಲೆಕ್ಸ್​ಗಳನ್ನ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.

ಅನಧಿಕೃತ ಫ್ಲೆಕ್ಸ್​ಗಳನ್ನು ತೆರವುಗೊಳಿಸಿದ ಪಾಲಿಕೆ

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೆ ನಗರದ ವಿವಿಧ ಸರ್ಕಲ್ಗಳಲ್ಲಿ ಹಾಕಿದ್ದ ಫ್ಲೆಕ್ಸ್​ಗಳನ್ನ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.

ಅನಧಿಕೃತ ಫ್ಲೆಕ್ಸ್​ಗಳನ್ನು ತೆರವುಗೊಳಿಸಿದ ಪಾಲಿಕೆ

ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ರವರ ಆದೇಶದ ಮೇರೆಗೆ ಪಾಲಿಕೆ ಸಿಬ್ಬಂದಿಗಳು ಅನಧಿಕೃತ ಪ್ಲೆಕ್ಸ್​ಗಳನ್ನ ತೆಗೆದುಹಾಕಿದ್ದಾರೆ. ನಗರದ ಅಂಬೇಡ್ಕರ್ ವೃತ್ತ, ಲಕ್ಷ್ಮಿ ಟಾಕೀಸ್ ವೃತ್ತ ಹಾಗೂ ಪೊಲೀಸ್ ಚೌಕಿ ಬಳಿಯಲ್ಲಿ ಹಾಕಿದ್ದ 20 ಕ್ಕೂ ಹೆಚ್ಚು ಫ್ಲೆಕ್ಸ್​ಗಳನ್ನ ತೆರವು ಮಾಡಿ, ತಮ್ಮ ವಾಹನದಲ್ಲಿ ತುಂಬಿ ಕೊಂಡು ಹೋಗಿದ್ದಾರೆ.

ಶಿವಮೊಗ್ಗದಲ್ಲಿ ನಡೆಯುವ ಅಧಿಕೃತಿಕೆ ಜಾತ್ರೆ ಹಿನ್ನಲೆಯಲ್ಲಿ ತಮಿಳು ಸಮಾಜದ ಮುಖಂಡರುಗಳು ತಮ್ಮ ನೆಚ್ಚಿನ ನಾಯಕರುಗಳೊಂದಿಗೆ ಶುಭಾಷಯಕೋರುವ ಫ್ಲೆಕ್ಸ್​ಗಳನ್ನು ಹಾಕಿದ್ದರು.

For All Latest Updates

TAGGED:

ABOUT THE AUTHOR

...view details