ಕರ್ನಾಟಕ

karnataka

ETV Bharat / state

ನಿಸರ್ಗದ ಜೀವ ವೈವಿಧ್ಯ ಬದಲಾವಣೆಗೆ ಮಾನವನೇ ಕಾರಣ: ಡಾ. ಅಶೋಕ ದಳವಾಯಿ - ಆತಂಕ

ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ ಯಲ್ಲಿ ಭವಿಷ್ಯಕ್ಕಾಗಿ ಜೀವ ವೈವಿಧ್ಯತೆ ಮತ್ತು ಸಸ್ಯ ಸಂಪನ್ಮೂಲಗಳ ಸಂರಕ್ಷಣೆ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೈಸರ್ಗಿಕ ಜೀವ ವೈವಿಧ್ಯತೆ ನಾಶವಾದರೆ ಎಂತಹ ಅನಾಹುತ ಉಂಟಾಗುತ್ತದೆ ಎಂಬುದಕ್ಕೆ ಕೇರಳ ಹಾಗೂ ಕೊಡಗಿನಲ್ಲಿ ನಡೆದ ವಿಕೋಪಗಳು ನಮಗೆ ನಿದರ್ಶನಗಳಾಗಿವೆ ಎಂದರು.

ಡಾ. ಅಶೋಕ ದಳವಾಯಿ

By

Published : Mar 15, 2019, 11:52 PM IST

ಶಿವಮೊಗ್ಗ: ಮಾನವನ ಹಸ್ತಕ್ಷೇಪದಿಂದ ನೈಸರ್ಗಿಕ ಜೀವ ವೈವಿಧ್ಯತೆ ಬದಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶಗಳ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಶೋಕ ದಳವಾಯಿ ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಅಶೋಕ ದಳವಾಯಿ

ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ ಯಲ್ಲಿ ಭವಿಷ್ಯಕ್ಕಾಗಿ ಜೀವ ವೈವಿಧ್ಯತೆ ಮತ್ತು ಸಸ್ಯ ಸಂಪನ್ಮೂಲಗಳ ಸಂರಕ್ಷಣೆ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೈಸರ್ಗಿಕ ಜೀವ ವೈವಿಧ್ಯತೆ ನಾಶವಾದರೆ ಎಂತಹ ಅನಾಹುತ ಉಂಟಾಗುತ್ತದೆ ಎಂಬುದಕ್ಕೆ ಕೇರಳ ಹಾಗೂ ಕೊಡಗಿನಲ್ಲಿ ನಡೆದ ವಿಕೋಪಗಳು ನಮಗೆ ನಿದರ್ಶನಗಳಾಗಿವೆ ಎಂದರು.

ಶಿವಮೊಗ್ಗ ಪಶ್ಚಿಮಘಟ್ಟದ ಹೆಬ್ಬಾಗಿಲು ಜೀವ ವೈವಿಧ್ಯತೆಯ ತವರಾಗಿದೆ. ಆದರೆ ಎಂಭತ್ತರ ದಶಕದಲ್ಲಿದ್ದ ಕಾಡುಗಳು ಈಗ ಕಾಣಿಸುತ್ತಿಲ್ಲ. ಎರಡನೇ ಹಂತದ ಅರಣ್ಯಗಳು ಅಸ್ತಿತ್ವಕ್ಕೆ ಬಂದರೂ ಅವು ಹೆಚ್ಚು ವೈವಿಧ್ಯತೆಯಿಂದ ಕೂಡಿಲ್ಲ. ಎಂಪಿಎಂ ಕಾರ್ಖಾನೆಗಳಿಗೆ ಕಚ್ಚಾ ವಸ್ತು ಪೂರೈಕೆ ಮಾಡಲು ಬೆಳೆಸಿದ ಕಾಡುಗಳು ಇದಕ್ಕೆ ಕಾರಣವಿರಬಹುದು ಎಂದು ಹೇಳಿದರು.

ABOUT THE AUTHOR

...view details