ಶಿವಮೊಗ್ಗ: ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ರೈಲಿಗೆ ಅಲ್ಪಸಂಖ್ಯಾತರ ಓಲೈಕೆ ದೃಷ್ಟಿಯಿಂದ ಟಿಪ್ಪು ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ. ಈ ಹೆಸರನ್ನು ತಕ್ಷಣ ಬದಲಾಯಿಸಿ ಶ್ರೀ ಕೃಷ್ಣರಾಜ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡುವಂತೆ ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರು ಪ್ರತಿಭಟಿಸಿದ್ರು.
ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಕೃಷ್ಣರಾಜ ಒಡೆಯರ್ ಹೆಸರಿಡಿ: ಹಿಂದೂ ಜನ ಜಾಗೃತಿ ಸಮಿತಿ ಒತ್ತಾಯ - sri krishnaraja wodeyar
ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ರೈಲಿಗೆ ಅಲ್ಪಸಂಖ್ಯಾತರ ಓಲೈಕೆ ದೃಷ್ಟಿಯಿಂದ ಟಿಪ್ಪು ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ. ಈ ಹೆಸರು ಬದಲಾಯಿಸಿ ಶ್ರೀ ಕೃಷ್ಣರಾಜ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಬೇಕು ಎಂದು ಹಿಂದೂ ಜನ ಜಾಗೃತಿ ಸದಸ್ಯರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು, ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ಮತ್ತು 35-ಎ ವಿಧಿಯನ್ನು ರದ್ದು ಪಡಿಸಿರುವುದನ್ನು ಸ್ವಾಗತಿಸಿದ್ರು. ಆದರೆ, 1990ರಲ್ಲಿ ಲಕ್ಷಾಂತರ ಕಾಶ್ಮೀರಿ ಹಿಂದೂ ಮೂಲನಿವಾಸಿಗಳನ್ನು ಭಯೋತ್ಪಾದಕರು ಕಣಿವೆ ರಾಜ್ಯದಿಂದ ಹೊರಹಾಕಿದ್ದರು. ಅವರೆಲ್ಲಾ ಈಗ ದೆಹಲಿ-ಹರಿಯಾಣದಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಕೇಂದ್ರ ಸರ್ಕಾರ ತಕ್ಷಣವೇ ಕಾಶ್ಮೀರದಲ್ಲಿ ಇವರೆಲ್ಲರಿಗೂ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿದ್ರು.
ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಹಿಂದೂ ಸಮಾಜದ ವಿರುದ್ಧ ದ್ವೇಷ ಭಾವನೆ ಹರಡಲಾಗುತ್ತಿದೆ. ಇದನ್ನು ತಪ್ಪಿಸಬೇಕು. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ರಾಷ್ಷ್ರಮಟ್ಟದಲ್ಲಿ ವಿಶೇಷ ತನಿಖಾದಳ ರಚಿಸಬೇಕು. ಚರ್ಚುಗಳಲ್ಲಿ ಹಗರಣಗಳು ಹೆಚ್ಚುತ್ತಿವೆ. ಲೈಂಗಿಕ ಶೋಷಣೆ ಬಹಿರಂಗವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಚರ್ಚುಗಳನ್ನು ಸರ್ಕಾರೀಕರಣಗೊಳಿಸಬೇಕು ಮತ್ತು ಹಿಂದೂ ದೇವಾಲಯಗಳ ಸರ್ಕಾರೀಕರಣವನ್ನು ಕೈಬಿಡಬೇಕು ಎಂದು ಸಂಘಟನೆ ಸದಸ್ಯರು ಪಟ್ಟುಹಿಡಿದ್ರು.