ಕರ್ನಾಟಕ

karnataka

ETV Bharat / state

ಇಪ್ಪತ್ತು ವರ್ಷಗಳ ಹಿಂದೆ ಊರು ಬಿಟ್ರು:  ಹುಟ್ಟೂರಿಗೇ ಬಂದು ಆತ್ಮಹತ್ಯೆ ಮಾಡಿಕೊಂಡ್ರು! ಏನಿದು ಸುಸೈಡ್​ ಮಿಸ್ಟ್ರಿ?

ಹುಟ್ಟಿದ ಊರನ್ನು ತೊರೆದು ಹೋಗಿದ್ದವರು ಮತ್ತೆ ಅದೇ ಗ್ರಾಮಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಶಿವಮೊಗ್ಗ ತಾಲೂಕು ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ

three-people-commit-suicide
ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ಮೂರು ಜನ ಆತ್ಮಹತ್ಯೆ

By

Published : Jan 23, 2020, 9:21 PM IST

ಶಿವಮೊಗ್ಗ:ಹುಟ್ಟಿದ ಊರನ್ನು ತೊರೆದು ಹೋಗಿದ್ದವರು ಮತ್ತೆ ಅದೇ ಗ್ರಾಮಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಶಿವಮೊಗ್ಗ ತಾಲೂಕು ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಜ್ಞಾನಮೂರ್ತಿ(58), ರತ್ನಮ್ಮ(53) ಹಾಗೂ ಚನ್ನೇಶ್(34) ಎಂಬ ಮೂವರು ವಿಷ ಸೇವಿಸಿದ್ದು, ಜ್ಞಾನಮೂರ್ತಿ ಹಾಗೂ ಚನ್ನೇಶ್ ಮೃತರಾಗಿದ್ದು, ರತ್ನಮ್ಮ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದಾರೆ.

ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ಮೂರು ಜನ ಆತ್ಮಹತ್ಯೆ

ಕಳೆದ ಇಪ್ಪತ್ತು ವರ್ಷಗಳ ಹಿಂದೆ ಜ್ಞಾನಮೂರ್ತಿಯು ರತ್ನಮ್ಮ ಎಂಬ ವಿವಾಹಿತ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಕರೆದುಕೊಂಡು, ತನ್ನ ಹೆಂಡ್ತಿ ಹಾಗೂ ಮೂವರು ಗಂಡು ಮಕ್ಕಳನ್ನು ಬಿಟ್ಟು ಮೈಸೂರಿನ ಬಲಮುರಿಗೆ ಹೋಗಿದ್ದ. ಅಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡು, ರತ್ನಮ್ಮಳ ಇಬ್ಬರು ಮಕ್ಕಳಿಗೆ ಮದುವೆ ಮಾಡಿ ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು.

ಕಳೆದ ನಾಲ್ಕೈದು ವರ್ಷಗಳಿಂದ ನುಗ್ಗೆ ಮಲ್ಲಾಪುರಕ್ಕೆ ಆಗಾಗ ಬಂದು ಹೋಗುವುದು ಮಾಡುತ್ತಿದ್ದರು. ಆದರೆ ನಿನ್ನೆ ಜ್ಞಾನಮೂರ್ತಿ, ರತ್ನಮ್ಮ ಹಾಗೂ ಮಗ ಚನ್ನೇಶನ ಶಿವಮೊಗ್ಗದತ್ತ ತಮ್ಮ ಕಾರಿನಲ್ಲಿ ಬಂದು, ನುಗ್ಗೆ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಕಾರಿನಲ್ಲಿ ಮೂವರು ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಖಾಸಗಿ‌ ಆಸ್ಪತ್ರೆಗೆ ದಾಖಲು ಮಾಡಿದ್ದು, ಜ್ಞಾನಮೂರ್ತಿ ಹಾಗೂ ಚನ್ನೇಶ್ ಸಾವನ್ನಪ್ಪಿದ್ದು, ರತ್ನಮ್ಮ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

For All Latest Updates

ABOUT THE AUTHOR

...view details