ಶಿವಮೊಗ್ಗ: ಹಾಲು ಒಕ್ಕೂಟ(ಶಿಮುಲ್)ನಲ್ಲಿ ಹಾಲು ಉತ್ಪಾದನೆ ಲಾಕ್ಡೌನ್ ಬಳಿಕ ಗಣನೀಯವಾಗಿ ಹೆಚ್ಚಾಗಿದ್ದು, ಹಾಲನ್ನು ಮಾರಾಟ ಮಾಡುವುದೇ ಶಿಮುಲ್ಗೆ ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಹೈದರಾಬಾದ್ನಲ್ಲಿ ತನ್ನದೇ ಆದ ಮಾರುಕಟ್ಟೆ ರೂಪಿಸಿಕೊಳ್ಳಲು ಶಿಮುಲ್ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ನಿಜಾಮರ ನಾಡಲ್ಲಿ ಶಿಮುಲ್ನ ನಂದಿನಿ ಹಾಲು ಮಾರಾಟವಾಗಲಿದೆ.
ಶಿಮುಲ್ ಚಿತ್ತ ಹೈದರಾಬಾದ್ನತ್ತ... 1 ಲಕ್ಷ ಲೀಟರ್ ಹಾಲು ಮಾರಾಟದ ಗುರಿ
ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯನ್ನೊಳಗೊಂಡ ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಪ್ರತಿದಿನ ಬರೋಬ್ಬರಿ 6.4 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ ಮಾರಾಟಾಗುತ್ತಿರುವುದು 2 ಲಕ್ಷ ಲೀಟರ್ ಹಾಲು ಮಾತ್ರ.
ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯನ್ನೊಳಗೊಂಡ ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಪ್ರತಿದಿನ ಬರೋಬ್ಬರಿ 6.4 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ ಮಾರಾಟಾಗುತ್ತಿರುವುದು 2 ಲಕ್ಷ ಲೀಟರ್ ಹಾಲು ಮಾತ್ರ. ಇನ್ನೂ ಒಂದು ಲಕ್ಷ ಲೀಟರ್ ಹಾಲನ್ನು ಬೇರೆ ಡೈರಿಗಳಿಗೆ ನೀಡಲಾಗುತ್ತಿದೆ. ಆದರೂ ಇನ್ನೂ 3.4 ಲಕ್ಷ ಲೀಟರ್ ಹಾಲು ಹಾಗೆಯೇ ಉಳಿಯುತ್ತಿದೆ. ಹಾಗಾಗಿ ಈ ಹಾಲನ್ನು ಮಾರಾಟ ಮಾಡುವ ಸಲುವಾಗಿ ಹೈದರಾಬಾದ್ ಮಾರುಕಟ್ಟೆಗೆ ಕಾಲಿಡಲು ಶಿಮುಲ್ ನಿರ್ಧರಿಸಿದೆ. ಜೊತೆಗೆ ಇಲ್ಲಿನ ಅಧಿಕಾರಿಗಳು ಹೈದರಾಬಾದ್ಗೆ ತೆರಳಿ ಅಲ್ಲಿ ಸೂಕ್ತ ಮಾರುಕಟ್ಟೆಯನ್ನು ಮಾಡಲು ಸಿದ್ಧತೆ ಆರಂಭಿಸಿದ್ದಾರೆ.
ಹೈದರಾಬಾದ್ನಲ್ಲಿ ಆರಂಭದಲ್ಲಿ 20 ಸಾವಿರ ಲೀಟರ್ ಹಾಲನ್ನು ಪ್ರತಿದಿನ ಮಾರಾಟ ಮಾಡಲು ಶಿಮುಲ್ ಯೋಜನೆ ಸಿದ್ಧಪಡಿಸಿದೆ. ಆರಂಭದಲ್ಲಿ ಸಣ್ಣದಾಗಿ ಮಾರುಕಟ್ಟೆ ಸೃಷ್ಟಿಸಿಕೊಂಡು ನಂತರದಲ್ಲಿ ಮಾರುಕಟ್ಟೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಒಟ್ಟಾರೆ ಪ್ರತಿದಿನ ಒಂದು ಲಕ್ಷ ಲೀಟರ್ ಹಾಲನ್ನು ಹೈದರಾಬಾದ್ನಲ್ಲಿ ಮಾರಾಟ ಮಾಡುವ ಗುರಿಯನ್ನು ಶಿಮುಲ್ ಹೊಂದಿದೆ.