ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ್ದ ಮುಖ್ಯ ಶಿಕ್ಷಕಿ ಅಮಾನತು - ಖಾಸಗಿ ಶಾಲೆಯಲ್ಲಿ ಮುಸ್ಲಿಂ ಮಕ್ಕಳಿಗೆ ನಮಾಜ್ ಮಾಡಲು ಅವಕಾಶ

ಶಿವಮೊಗ್ಗ ನಗರದ ಗೋಪಾಲ ಬಡಾವಣೆಯ ವಿದ್ಯಾನಿಕೇತನ ಶಾಲೆಯಲ್ಲಿ ಅನ್ಯಧರ್ಮೀಯ ಮಕ್ಕಳು ಹೆಚ್ಚಾಗಿ ಇರುವುದರಿಂದ ಶಾಲೆಯ ಮುಖ್ಯ ಶಿಕ್ಷಕಿ ಜಬೀನಾ ಪರ್ವಿನ್ ಮಕ್ಕಳಿಗೆ ನಮಾಜ್ ಮಾಡಲು ಅವಕಾಶ ಕಲ್ಪಿಸಿದ್ದರು.

ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ್ದ ಮುಖ್ಯ ಶಿಕ್ಷಕಿ ಅಮಾನತು
ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ್ದ ಮುಖ್ಯ ಶಿಕ್ಷಕಿ ಅಮಾನತು

By

Published : Mar 22, 2022, 6:55 PM IST

ಶಿವಮೊಗ್ಗ: ಇಲ್ಲಿನ ಖಾಸಗಿ ಶಾಲೆಯಲ್ಲಿ ಇಸ್ಲಾಂ ಧರ್ಮೀಯ ಮಕ್ಕಳಿಗೆ ನಮಾಜ್ ಮಾಡಲು ಅವಕಾಶ ನೀಡಿದ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಜಬೀನಾ ಪರ್ವಿನ್ ಅಮಾನತುಗೊಂಡ ಮುಖ್ಯ ಶಿಕ್ಷಕಿ. ಗೋಪಾಲ ಬಡಾವಣೆಯ ವಿದ್ಯಾನಿಕೇತನ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಮುಸ್ಲಿಂ ಧರ್ಮೀಯ ಮಕ್ಕಳೇ ಹೆಚ್ಚಾಗಿರುವ ಕಾರಣಕ್ಕೆ ಜಬೀನಾ ಪರ್ವಿನ್ ನಮಾಜ್ ಮಾಡಲು ಅವಕಾಶ ಕಲ್ಪಿಸಿದ್ದರು. ಈ ವಿಚಾರ ತಿಳಿದ ಶಾಲೆಯ ಆಡಳಿತ ಮಂಡಳಿ ಕಠಿಣ ಕ್ರಮ ತೆಗೆದುಕೊಂಡಿದೆ. ಹಿಜಾಬ್‌ ವಿವಾದ ಇನ್ನೂ ಹಸಿರಾಗಿರುವಾಗಲೇ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ: ಗಾರೆ ಕೆಲಸ ಮಾಡ್ತಿದ್ದ ಮಹದೇವಸ್ವಾಮಿಗೆ 14 ಚಿನ್ನದ ಪದಕ.. ಹೆತ್ತವರಿರದ ಮುತ್ತಿನಂತ ತೇಜಸ್ವಿನಿಗೆ 9 ಬಂಗಾರದ ಪದಕ..

For All Latest Updates

TAGGED:

ABOUT THE AUTHOR

...view details