ಕರ್ನಾಟಕ

karnataka

ETV Bharat / state

ಜನಮನ ಸೂರೆಗೊಂಡ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ: ಚಾರ್ಲಿ ಸಿನಿಮಾದ ನಾಯಿ ಕೂಡ ಭಾಗಿ! - ಶಿವಮೊಗ್ಗದ ಫ್ರೀಡಂ ಪಾರ್ಕ್​ನಲ್ಲಿ ಶ್ವಾನ ಪ್ರದರ್ಶನ

State-level dog show in shimoga : ಇಲ್ಲಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಈ ಕಾರ್ಯಕ್ರಮ ಜರುಗಿತು. ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ಶ್ವಾನ ಪ್ರಿಯರನ್ನು ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

State-level dog show in shimoga
ಜನಮನ ಸೂರೆಗೊಂಡ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ

By

Published : Dec 20, 2021, 5:44 PM IST

Updated : Dec 20, 2021, 6:12 PM IST

ಶಿವಮೊಗ್ಗ: ಇಲ್ಲಿ ಶ್ವಾನಗಳ ಅದ್ಭುತ ಲೋಕವೇ ಅನಾವರಣಗೊಂಡಿತ್ತು. ದೇಶ ವಿದೇಶಗಳ ವಿವಿಧ ತಳಿಯ ಇನ್ನೂರಕ್ಕೂ ಹೆಚ್ಚು ನಾಯಿಗಳು ಒಟ್ಟಿಗೆ ನೆರೆದಿದ್ದವು. ಶ್ವಾನಗಳು ಕೂಡ ಮಾರ್ಗದರ್ಶಕರ ಜತೆ ತಾವ್ಯಾರಿಗೂ ಕಡಿಮೆ ಇಲ್ಲ ಎಂದು ಹೆಜ್ಜೆ ಹಾಕಿದವು.

ಇದನ್ನು ಕಂಡ ಶ್ವಾನ ಪ್ರಿಯರು ಸಖತ್ ಎಂಜಾಯ್ ಮಾಡಿದರಲ್ಲದೇ, ನಾವೂ ಕೂಡ ಈ ರೀತಿಯ ನಾಯಿಗಳನ್ನು ಸಾಕಬೇಕೆಂದುಕೊಂಡರು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡು ಜನರನ್ನು ರಂಜಿಸಿದವು. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ.

ಚಾರ್ಲಿ ಸಿನಿಮಾನ ನಾಯಿ ಕೂಡ ಭಾಗಿ

ಇಲ್ಲಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಈ ಕಾರ್ಯಕ್ರಮ ಜರುಗಿತು. ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ಶ್ವಾನ ಪ್ರಿಯರನ್ನು ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶ್ವಾನ ಪ್ರದರ್ಶನದಲ್ಲಿ ಶ್ವಾನ ಮಾಲೀಕರು ಪ್ರೀತಿಯಿಂದ ಸಾಕಿ ಸಲಹಿದ ನಾಯಿಗಳನ್ನು ತಂದು ಪ್ರದರ್ಶಿಸಿದರು. ಶ್ವಾನ ಪ್ರದರ್ಶನದಲ್ಲಿ ದೇಶ ವಿದೇಶಗಳ 30ಕ್ಕೂ ವಿವಿಧ ತಳಿಯ ಇನ್ನೂರಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡಿದ್ದವು.

ಕರ್ನಾಟಕದ ಮುದೋಳ್, ರ್ಯಾಟ್ ವೀಲರ್, ಬಾಕ್ಸರ್, ಜರ್ಮನ್ ಶೆಫರ್ಡ, ಸೈಬೇರಿಯನ್ ಹಸ್ಕಿ, ಲ್ಯಾಬ್ರ ಡಾಗ್, ಡ್ಯಾಷ್ ಎಂಡ್, ಸೆಂಟ್ ರ್ನಾಡ್, ಪಗ್, ಪಮೋರಿಯನ್ ಸೇರಿದಂತೆ ವಿವಿಧ ತಳಿಯ ನಾಯಿಗಳು ಪಾಲ್ಗೊಂಡಿದ್ದವು.

ಜನಮನ ಸೂರೆಗೊಂಡ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ

ಇದನ್ನೂ ಓದಿ:ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಕನ್ನಡ ದ್ರೋಹಿಗಳನ್ನು ಗಡಿಪಾರು ಮಾಡಿ, ಆ ಸಂಘಟನೆ ನಿಷೇಧಿಸಿ: ಹೆಚ್‌ಡಿಕೆ ಒತ್ತಾಯ

ಶ್ವಾನಗಳ ಪ್ರದರ್ಶನದಲ್ಲಿ ಅವುಗಳ ಆರೋಗ್ಯ, ಬೆಳವಣಿಗೆ, ನಡಿಗೆ, ದೇಹದ ಆಕಾರ ಗಮನಸಿ ಪ್ರಶಸ್ತಿ ನೀಡಲಾಯಿತು. ಇದರಲ್ಲಿ ಪ್ರಥಮ, ದ್ವೀತಿಯ ಬಹುಮಾನಗಳನ್ನು ಗಳಿಸಿದ ಶ್ವಾನಗಳಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಅಲ್ಲದೇ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡ ಶ್ವಾನಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಶಿವಮೊಗ್ಗದ ಜನರು ವಿವಿಧ ತಳಿಯ ಶ್ವಾನಗಳನ್ನು ಒಂದೇ ವೇದಿಕೆಯಲ್ಲಿ ಕಂಡು ಸಖತ್ ಎಂಜಾಯ್ ಮಾಡಿದರಲ್ಲದೇ, ಅವರಲ್ಲೂ ಕೂಡ ಶ್ವಾನ ಪ್ರೀತಿ ಬೆಳೆಸಿಕೊಂಡರು ಎಂದೇ ಹೇಳಬಹುದು. ಅದರ ಜೊತೆಗೆ ಚಾರ್ಲಿ 777 ಚಿತ್ರದ ನಾಯಿ ಕೂಡ ಪ್ರದರ್ಶನದಲ್ಲಿ ಬಾಗಿಯಾಗಿದ್ದು ವಿಶೇಷವಾಗಿತ್ತು.

Last Updated : Dec 20, 2021, 6:12 PM IST

ABOUT THE AUTHOR

...view details