ಶಿವಮೊಗ್ಗ: ಮಹಾಮಾರಿ ಕೋವಿಡ್ ಇರುವ ಹಿನ್ನೆಲೆ ಈ ಬಾರಿ ಶಿವಮೊಗ್ಗ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಶಿವಮೊಗ್ಗ: ಕೋವಿಡ್ ಹಿನ್ನೆಲೆ ಸರಳ ದಸರಾ ಹಬ್ಬ ಆಚರಣೆ - ಸರಳ ದಸರಾ ಹಬ್ಬ ಆಚರಣೆ
ನಾಳೆ ಬೆಳಗ್ಗೆ 8-30ಕ್ಕೆ ದಸರಾ ಪೂಜಾ ಕಾರ್ಯಕ್ರಮ ಮಹಾನಗರ ಪಾಲಿಕೆ ಆವರಣದಲ್ಲಿ ನೆರವೇರಲಿದೆ. ನಂತರ 11 ಗಂಟೆಗೆ ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಕೊರೊನಾ ವಾರಿಯರ್ಸ್‌ಗಳು ಉದ್ಘಾಟನೆ ಮಾಡಲಿದ್ದಾರೆ.
ಹಾಗಾಗಿ ಮಹಾನಗರ ಪಾಲಿಕೆ ಸೇಫ್ ಲಾಕರ್ನಲ್ಲಿದ್ದ ಬೆಳ್ಳಿ ಮೂರ್ತಿಯ ಅಂಬಾರಿಯನ್ನು ಹಾಗೂ ನಾಡದೇವತೆಯ ಬೆಳ್ಳಿ ಮೂರ್ತಿಯನ್ನು ಹೊರ ತೆಗೆದು ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಾಲಿನ ದಸರಾದಲ್ಲಿ ಮೆರವಣಿಗೆ ಇಲ್ಲದಿರುವುದರಿಂದ ಮನೆಯಿಂದಲೇ ಸರಳ ದಸರಾ ಉತ್ಸವ ವೀಕ್ಷಿಸಲು ಮಹಾನಗರ ಪಾಲಿಕೆಯಿಂದ ವಿದ್ಯುನ್ಮಾನ ಉಪಕರಣಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ.
ನಾಳೆಯಿಂದ ದಸರಾ ಪ್ರಾರಂಭವಾಗಲಿದ್ದು, ನಾಳೆ ಬೆಳಗ್ಗೆ 8-30ಕ್ಕೆ ದಸರಾ ಪೂಜಾ ಕಾರ್ಯಕ್ರಮ ಮಹಾನಗರ ಪಾಲಿಕೆ ಆವರಣದಲ್ಲಿ ನೆರವೇರಲಿದೆ. ನಂತರ 11 ಗಂಟೆಗೆ ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಕೊರೊನಾ ವಾರಿಯರ್ಸ್‌ಗಳು ಉದ್ಘಾಟನೆ ಮಾಡಲಿದ್ದಾರೆ. ಈ ಬಾರಿ ದಸರಾ ಹಬ್ಬಕ್ಕೆ ನೂರು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.