ಕರ್ನಾಟಕ

karnataka

ETV Bharat / state

ಎರಡ್ಮೂರು ವರ್ಷದಲ್ಲಿ ಶಿವಮೊಗ್ಗ ಅಭಿವೃದ್ಧಿ ಹೊಂದಿದ ನಗರವಾಗಲಿದೆ : ಬಿ ವೈ ರಾಘವೇಂದ್ರ - ಆಯುರ್ವೇದ ವಿಶ್ವವಿದ್ಯಾಲಯ

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ಸ್ಮಾರ್ಟ್ ಸಿಟಿ ಯೋಜನೆ, ಕೃಷಿ ಮಹಾವಿದ್ಯಾಲಯ, ಇಎಸ್ಇ ಆಸ್ಪತ್ರೆ ಹಾಗೂ ಆಯುರ್ವೇದ ವಿಶ್ವವಿದ್ಯಾಲಯ ಹೀಗೆ ಜಿಲ್ಲೆಯು ಸರ್ವಾಂಗೀಣ ಅಭಿವೃದ್ಧಿ ಆಗುತ್ತಿದೆ..

MP Raghavendra
ಬಿ.ವೈ ರಾಘವೇಂದ್ರ

By

Published : Sep 3, 2021, 3:34 PM IST

ಶಿವಮೊಗ್ಗ :ಬರುವ ಎರಡ್ಮೂರು ವರ್ಷಗಳಲ್ಲಿ ದೇಶದಲ್ಲೇ ಅಭಿವೃದ್ಧಿ ಹೊಂದಿದ ನಗರಗಳ ಪಟ್ಟಿಯಲ್ಲಿ ಶಿವಮೊಗ್ಗವೂ ಇರಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.

ನಗರದ ನವುಲೆಯಲ್ಲಿ ರಸ್ತೆಯ ವಿಭಜಕ ಅಲಂಕಾರಿಕ ವಿದ್ಯುತ್ ದೀಪ ಕಾಮಗಾರಿಯನ್ನ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾರ್ಯ ಆಗುತ್ತಿದೆ. ಹಾಗಾಗಿ, ಮುಂಬರುವ ಎರಡ್ಮೂರು ವರ್ಷಗಳಲ್ಲಿ ದೇಶದಲ್ಲೇ ಅಭಿವೃದ್ಧಿ ಹೊಂದಿದ ನಗರಗಳ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆ ಇರಲಿದೆ ಎಂದರು.

ಎರಡ್ಮೂರು ವರ್ಷದಲ್ಲಿ ಶಿವಮೊಗ್ಗ ಅಭಿವೃದ್ಧಿ ಹೊಂದಿದ ನಗರವಾಗಲಿದೆ : ಸಂಸದ ಬಿ ವೈ ರಾಘವೇಂದ್ರ

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ಸ್ಮಾರ್ಟ್ ಸಿಟಿ ಯೋಜನೆ, ಕೃಷಿ ಮಹಾವಿದ್ಯಾಲಯ, ಇಎಸ್ಇ ಆಸ್ಪತ್ರೆ ಹಾಗೂ ಆಯುರ್ವೇದ ವಿಶ್ವವಿದ್ಯಾಲಯ ಹೀಗೆ ಜಿಲ್ಲೆಯು ಸರ್ವಾಂಗೀಣ ಅಭಿವೃದ್ಧಿ ಆಗುತ್ತಿದೆ.

ಅದರಂತೆ ಶಿವಮೊಗ್ಗ ವಿಮಾನ ನಿಲ್ದಾಣ ಏಪ್ರಿಲ್​​ನಲ್ಲಿ ಉದ್ಘಾಟನೆಯಾಗಲಿದೆ. ಆಗ ಕೈಗಾರಿಕೆಗಳು ಜಿಲ್ಲೆಯಲ್ಲಿ ಹೂಡಿಕೆ ಮಾಡಲಿವೆ. ಜೊತೆಗೆ ಮಧ್ಯಮ ವರ್ಗದ ಜನರು ಸಹ ಉಡಾನ್ ಯೋಜನೆ ಮೂಲಕ ವಿಮಾನದಲ್ಲಿ ಹಾರಾಟ ಮಾಡಬಹುದಾಗಿದೆ ಎಂದರು.

ಓದಿ:ಗಣಪತಿ ಹಬ್ಬವನ್ನು ಯಶಸ್ವಿಯಾಗಿ ನಡೆಸೇ ನಡೆಸುತ್ತೇವೆ : ಸಚಿವ ಕೆ ಎಸ್ ಈಶ್ವರಪ್ಪ

ABOUT THE AUTHOR

...view details