ಶಿವಮೊಗ್ಗ:ಮಾಹಾಮಾರಿ ಕೊರೊನಾದಿಂದ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನ ಮಾತ್ರ ಯಾವುದಕ್ಕೂ ಹೆದರುತ್ತಿಲ್ಲ. ಗೌರಿ-ಗಣೇಶ ಹಬ್ಬದ ಖರೀದಿ ನಗರದಲ್ಲಿ ಜೋರಾಗಿರುವುದು ಇದಕ್ಕೆ ಒಂದು ನಿದರ್ಶನ.
ಶಿವಮೊಗ್ಗದಲ್ಲಿ ಕೊರೊನಾ ಭೀತಿ ನಡುವೆ ಖರೀದಿ ಜೋರು - Ganesh Chaturthi
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಬಾರಿಯ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಇದರಿಂದ ಒಂದೆಡೆ ಕುಸಿದಿದ್ದ ವ್ಯಾಪಾರ ಸ್ವಲ್ಪ ಮಟ್ಟಿಗೆ ಸುಧಾರಿಸಿದರೆ, ಮತ್ತೊಂದೆಡೆ ಅಂದುಕೊಂಡಷ್ಟು ಲಾಭ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಸ್ಥಳೀಯ ವ್ಯಾಪಾರಸ್ಥರು.
ಶಿವಮೊಗ್ಗದ ಮಾರುಕಟ್ಟೆ
ಇಲ್ಲಿನ ಶಿವಪ್ಪನಾಯಕ ಮಾರುಕಟ್ಟೆ, ಗಾಂಧಿ ಬಜಾರ್ ಸೇರಿದಂತೆ ನಗರದ ಹಲವೆಡೆ ಹಬ್ಬದ ಖರೀದಿ ಜೋರಾಗಿದೆ. ಆದರೆ, ಇಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರು ಖರೀದಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ಹೂ, ಹಣ್ಣು, ಬಾಳೆ ದಿಂಡು, ಮಾವಿನ ತೋರಣ ಸೇರಿದಂತೆ ಹಬ್ಬದ ವಸ್ತುಗಳ ಖರೀದಿ ನಡೆಯುತ್ತಿತ್ತು. ಕೊರೊನಾ ಹಾವಳಿಯಿಂದ ಕುಸಿದಿದ್ದ ವ್ಯಾಪಾರ ಹಬ್ಬದ ಹಿನ್ನೆಲೆ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಆದರೆ, ಕಳೆದ ಸಾರಿಯಂತೆ ಹಬ್ಬ ಸಹ ಅದ್ಧೂರಿಯಾಗುತ್ತಿಲ್ಲ. ಇದರಿಂದ ಅಂದುಕೊಂಡಷ್ಟು ಲಾಭವೂ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಕೆಲ ವ್ಯಾಪಾರಿಗಳು.