ಕರ್ನಾಟಕ

karnataka

By

Published : Jan 22, 2021, 7:48 AM IST

Updated : Jan 22, 2021, 12:49 PM IST

ETV Bharat / state

Live Updates: ಶಿವಮೊಗ್ಗ ಜಿಲೆಟಿನ್​ ಸ್ಫೋಟ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಘೋಷಣೆ ಮಾಡಿದ ಸಿಎಂ

Shivamogga dynamic blast, Shivamogga dynamic blast news, Shivamogga dynamic blast update, Shivamogga dynamic blast live news, ಶಿವಮೊಗ್ಗ ಜಿಲೆಟಿನ್​ ಸ್ಫೋಟ, ಶಿವಮೊಗ್ಗ ಜಿಲೆಟಿನ್​ ಸ್ಫೋಟ ಲೈವ್​ ಅಪ್​ಡೇಟ್​, ಶಿವಮೊಗ್ಗ ಜಿಲೆಟಿನ್​ ಸ್ಫೋಟ ಸುದ್ದಿ,
ಶಿವಮೊಗ್ಗ ಜಿಲೆಟಿನ್​ ಸ್ಫೋಟ ಪ್ರಕರಣ

11:21 January 22

ಶಿವಮೊಗ್ಗಕ್ಕೆ ಆಗಮಿಸಿದ ಬಾಂಬ್​ ಸ್ಕ್ವಾಡ್ ತಂಡಗಳು

  • ಶಿವಮೊಗ್ಗಕ್ಕೆ ಆಗಮಿಸಿದ ಬಾಂಬ್​ ಸ್ಕ್ವಾಡ್
  • ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ ಬಾಂಬ್​ ಸ್ಕ್ವಾಡ್​
  • ಘಟನಾಸ್ಥಳ ಪರಿಶೀಲನೆಗೆ ಆಗಮಿಸಿದ ಸ್ಕ್ವಾಡ್​
  • ಈಗಾಗಲೇ ಮಂಗಳೂರಿನಿಂದ ಬಾಂಬ್​ ಸ್ಕ್ವಾಡ್​ ತಂಡ ಬಂದಿದೆ
  • ಕಾರ್ಯ ಕೈಗೊಂಡಿರುವ ಬಾಂಬ್​ ಸ್ಕ್ವಾಡ್​ ತಂಡಗಳು

11:09 January 22

ಅಚಾತುರ್ಯದಿಂದ ಘಟನೆ ನಡೆದಿದೆ ಎಂದ ಸಿಎಂ

  • ಅಚಾತುರ್ಯದಿಂದ ಘಟನೆ ನಡೆದಿದೆ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
  • ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ
  • ಶಿವಮೊಗ್ಗಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಸಚಿವ ನಿರಾಣಿಗೆ ಸೂಚಿಸಲಾಗಿದೆ
  • ಈಗಾಗಲೇ ಸಂಸದ ರಾಘವೇಂದ್ರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ
  • ಎಲ್ಲ ಅಧಿಕಾರಿಗಳು ವಿಶೇಷವಾಗಿ ಗಮನ ಹರಿಸುತ್ತಿದ್ದಾರೆ ಎಂದು ಸಿಎಂ ಸ್ಪಷ್ಟನೆ
  • ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ
  • ಬೃಹತ್​ ಶಬ್ಧ ಕೇಳಿದ ಗ್ರಾಮಸ್ಥರು ಮನೆ ಬಿಟ್ಟು ಹೊರ ಓಡಿ ಬಂದಿದ್ದಾರೆ
  • ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು
  • ನಾಳೆ ನಾನು ಶಿವಮೊಗ್ಗಕ್ಕೆ ತೆರಳಿ ಘಟನೆ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸುತ್ತೇನೆ
  • ಯಾರೇ ಆಗಿದ್ರೂ ಸಹ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾವುದೆಂದು ಹೇಳಿದ ಸಿಎಂ ಬಿಎಸ್​ವೈ

10:07 January 22

ಶಿವಮೊಗ್ಗಕ್ಕೆ ತೆರಳಲಿರುವ ಸಚಿವ ನಿರಾಣಿ

  • ಶಿವಮೊಗ್ಗ ಜಿಲೆಟಿನ್​ ಸ್ಫೋಟ ಪ್ರಕರಣ
  • ನೂತನ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿಗೆ ಸಿಎಂ ಸೂಚನೆ
  • ಶಿವಮೊಗ್ಗಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಸಚಿವ ನಿರಾಣಿಗೆ ಸೂಚನೆ
  • ಸಿಎಂ ನಿರ್ದೇಶನದಂತೆ ಶಿವಮೊಗ್ಗಕ್ಕೆ ತೆರಳುತ್ತಿರುವ ನಿರಾಣಿ
  • ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಚರ್ಚಿಸಲಾಗಿದೆ
  • ಸಿಎಂ ಯಡಿಯೂರಪ್ಪವರ ಜೊತೆ ಚರ್ಚಿಸಲಾಗಿದೆ ಎಂದ ನಿರಾಣಿ
  • ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸಲಾಗುವುದು
  • ಉನ್ನತಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದ ಸಚಿವ

09:55 January 22

ಇಲ್ಲಿ ಸಕ್ರಮವಾಗಿಯೇ ಗಣಿಗಾರಿಕೆ ನಡೆಯುತ್ತಿದೆ ಎಂದ ಈಶ್ವರಪ್ಪ

  • ಸುಮಾರು ನೂರು ಕಿ.ಮೀ ದೂರದವರೆಗೆ ಸ್ಫೋಟದ ಶಬ್ದ ಕೇಳಿದೆ
  • ಶಬ್ದ ಕೇಳಿದೆ ಎಂದು ಸುತ್ತ-ಮುತ್ತ ಗ್ರಾಮಗಳಿಂದ ಸುದ್ದಿಗಳು ಬರುತ್ತಿವೆ
  • ಇದು ಜಿಲೆಟಿನ್​ನಿಂದ ಆಗಲು ಸಾಧ್ಯವಿಲ್ಲ ಎಂದ ಸಚಿವ ಈಶ್ವರಪ್ಪ
  • ಹೀಗಾಗಿ ತಜ್ಞರು ಬೆಂಗಳೂರಿನಿಂದ ಘಟನಾಸ್ಥಳಕ್ಕೆ ಬರುತ್ತಿದ್ದಾರೆ
  • ತಜ್ಞರು ನೀಡಿದ ವರದಿ ಬಳಿಕವೇ ಅಸಲಿ ಸತ್ಯ ಗೊತ್ತಾಗುವುದು ಎಂದ ಈಶ್ವರಪ್ಪ
  • ಸಾವು-ನೋವುಗಳ ಬಗ್ಗೆ ನಿಖರವಾಗಿ ಸ್ಪಷ್ಟತೆ ಇಲ್ಲ
  • ಕೆಲವು ದೇಹಗಳು ಛಿದ್ರ-ಛಿದ್ರವಾಗಿವೆ
  • ಸಾವು-ನೋವುಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಮಾಡಬೇಡಿ ಎಂದ ಸಚಿವ
  • ಇಲ್ಲಿ ಸಕ್ರಮವಾಗಿಯೇ ಗಣಿಗಾರಿಕೆ ನಡೆಯುತ್ತಿದೆ
  • ಅಕ್ರಮ-ಸಕ್ರಮ ಗಣಿಗಾರಿಕೆ ನಡೆಯುತ್ತಿರವುದು ಬೇರೆ ಪ್ರಶ್ನೆ
  • ಗಣಿಗಾರಿಕೆಗೆ ಸ್ಫೋಟದ ವಸ್ತು ಜಿಲೆಟಿನ್​ ಬಳಿಸುತ್ತಾರೆ
  • ಆದ್ರೆ ಇಂತಹದೊಂದು ದೊಡ್ಡ ಶಬ್ದ ಇದುವರೆಗೆ ಕರ್ನಾಟಕದಲ್ಲಿ ಕೇಳಿಲ್ಲ
  • ಈ ಸ್ಫೋಟ ಹೇಗಾಯ್ತು ಎಂಬುದರ ಬಗ್ಗೆ ತುಂಬಾ ಆಶ್ಚರ್ಯವಾಗಿದೆ
  • ತನಿಖೆ ಬಳಿಕವೇ ಸಂಪೂರ್ಣ ಮಾಹಿತಿ ತಿಳಿದು ಬರಲಿದೆ
  • ವರದಿ ಬಂದ ಬಳಿಕವೇ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ
  • ಶಿವಮೊಗ್ಗ ಜಿಲೆಟಿನ್​ ಸ್ಫೋಟದ ಬಗ್ಗೆ ಮಾಹಿತಿ ನೀಡಿದ ಸಚಿವ ಈಶ್ವರಪ್ಪ

09:39 January 22

ಘಟನಾ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

ಶಿವಮೊಗ್ಗ:ಜಿಲ್ಲೆಯ ಹುನಸೋಡು ಗ್ರಾಮದಲ್ಲಿ ನಿನ್ನೆ ರಾತ್ರಿ ಸ್ಫೋಟ ಸಂಭವಿಸಿದ್ದು ಘಟನಾ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಬೀಡು ಬಿಟ್ಟಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ. 

09:31 January 22

ಘಟನಾ ಸ್ಥಳಕ್ಕೆ ಸಚಿವ ಕೆಎಸ್​ ಈಶ್ವರಪ್ಪ ಭೇಟಿ

  • ಘಟನಾ ಸ್ಥಳಕ್ಕೆ ಸಚಿವ ಕೆಎಸ್​ ಈಶ್ವರಪ್ಪ ಭೇಟಿ
  • ಕಾರ್ಮಿಕರ ಸಾವಿನ ಬಗ್ಗೆ ತಿಳಿದು ಈಶ್ವರಪ್ಪ ಸಂತಾಪ

09:24 January 22

ಶಿವಮೊಗ್ಗ ಸ್ಫೋಟದಲ್ಲಿ ಮೃತಪಟ್ಟವರಿಗೆ ಸಿದ್ದರಾಮಯ್ಯ ಸಂತಾಪ; ತನಿಖೆಗೆ ಒತ್ತಾಯ

ಬೆಂಗಳೂರು: ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ಸ್ಫೋಟಕ ವಸ್ತು(ಡೈನಾಮೈಟ್) ತುಂಬಿದ ಲಾರಿ ಸ್ಫೋಟಗೊಂಡು 8 ಜನರು ಕಾರ್ಮಿಕರು ಸಾವನ್ನಪ್ಪಿರುವ ಘಟನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜಿಲೆಟಿನ್ ಸಾಗಿಸುತ್ತಿದ್ದ ಟ್ರಕ್ ಸ್ಫೋಟದಿಂದಾಗಿ ಶಿವಮೊಗ್ಗದಲ್ಲಿ ಕಾರ್ಮಿಕರ ಸಾವಿನ ಬಗ್ಗೆ ತಿಳಿದು ತುಂಬಾ ನೋವಾಗಿದೆ. ಘಟನೆಯ ಬಗ್ಗೆ ರಾಜ್ಯ ಸರ್ಕಾರ ನಿಷ್ಪಕ್ಷಪಾತ ಮತ್ತು ಕಠಿಣ ವಿಚಾರಣೆಯನ್ನು ಪ್ರಾರಂಭಿಸಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಸಂತ್ರಸ್ತರ ಕುಟುಂಬ ಸದಸ್ಯರಿಗೆ ನನ್ನ ಸಾಂತ್ವನ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

09:22 January 22

ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ: ರಾಹುಲ್​ ಗಾಂಧಿ

  • ಕರ್ನಾಟಕದ ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿನ ಸ್ಫೋಟದ ಸುದ್ದಿ ದುರಂತಮಯವಾಗಿದೆ.
  • ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ
  • ಭವಿಷ್ಯದಲ್ಲಿ ಈ ರೀತಿಯ ದುರಂತಗಳನ್ನು ತಪ್ಪಿಸಲು ತನಿಖೆಗೆ ಆಗ್ರಹ ಮಾಡುತ್ತೇವೆ ಎಂದ ರಾಹುಲ್​ ಗಾಂಧಿ

09:06 January 22

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ಶಿವಮೊಗ್ಗ ಕ್ವಾರಿ ಸ್ಟೋಟ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಿನ್ನೆ ರಾತ್ರಿ ಶಿವಮೊಗ್ಗದ ಹುಣಸೋಡು ಬಳಿ ಸಂಭವಿಸಿದ ಭಾರಿ ಅನಾಹುತದಲ್ಲಿ ಅನೇಕ ಜನರು ದುರಂತ ಸಾವಿಗೀಡಾದ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಈ ದುರ್ಘಟನೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

08:26 January 22

ಮೃತರಿಗೆ ಸಂತಾಪ ಸೂಚಿಸಿದ ಹೆಚ್​ಡಿಕೆ

ಬೆಂಗಳೂರು:ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲೆಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

08:02 January 22

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಿಎಂ

  • ಶಿವಮೊಗ್ಗ ಜಿಲೆಟಿನ್​ ಸ್ಫೋಟ ಪ್ರಕರಣ
  • ಉನ್ನತಮಟ್ಟದ ತನಿಖೆಗೆ ಸಿಎಂ ಆದೇಶ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದ ಬಿಎಸ್​ವೈ
  • ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ
  • ಮೃತರಿಗೆ ಸಂತಾಪ ಸೂಚಿಸಿದ ಸಿಎಂ ಯಡಿಯೂರಪ್ಪ

07:49 January 22

ಶಿವಮೊಗ್ಗಕ್ಕೆ ಸಿಎಂ ಭೇಟಿ

  • ಶಿವಮೊಗ್ಗದಲ್ಲಿ ಸ್ಫೋಟ ಹಿನ್ನೆಲೆಯಲ್ಲಿ ಸಿಎಂ ನಾಳೆ ಶಿವಮೊಗ್ಗ ನಗರಕ್ಕೆ ಭೇಟಿ ನೀಡಲಿದ್ದಾರೆ
  • ನಾಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ

07:37 January 22

ಶಿವಮೊಗ್ಗ ದುರಂತಕ್ಕೆ ಕಂಬನಿ ಮೀಡಿದ ಪ್ರಧಾನಿ ಕಚೇರಿ

ಶಿವಮೊಗ್ಗ: ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ಸಾಗಿಸುತ್ತಿದ್ದ ಡೈನಾಮೈಟ್ ಸ್ಫೋಟಗೊಂಡಿರುವ ಪರಿಣಾಮ ಎಂಟು ಮಂದಿ ಸಾವನ್ನಪ್ಪಿರುವ ದುರಂತಕ್ಕೆ ಪ್ರಧಾನಿ ಮೋದಿ ಕಚೇರಿ ಕಂಬನಿ ಮೀಡಿದಿದೆ. ಶಿವಮೊಗ್ಗದಲ್ಲಿ ಸಂಭವಿಸಿದ ದುರಂತ ನೋವು ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಆದಷ್ಟು ಬೇಗ ಗಾಯಾಳುಗಳು ಗುಣಮುಖರಾಗಲಿ. ರಾಜ್ಯ ಸರ್ಕಾರ ಸಾಧ್ಯವಾದಷ್ಟು ಮೃತ ಕುಟುಂಬಕ್ಕೆ ಸಹಾಯ ಮಾಡಲಿದೆ ಎಂದು ಪ್ರಧಾನಿ ಕಚೇರಿ ಟ್ವೀಟ್​ ಮಾಡಿದೆ. 

Last Updated : Jan 22, 2021, 12:49 PM IST

ABOUT THE AUTHOR

...view details