ಶಿವಮೊಗ್ಗ : ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿ ದಯಾನಂದ ತರಾಟೆಗೆ ತೆಗೆದುಕೊಂಡರು.
ಹೊಸನಗರ ತಾಲೂಕಿನ ಬ್ರಾಹ್ಮಣ ಮಹಾಸಭಾ ಸಂಭಾಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲು ವಿಫಲರಾದರು. ಇದರಿಂದ ಕುಪಿತರಾದ ಡಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆ ಮಾಹಿತಿ ಇಲ್ಲದೇ ಕೈ ಬೀಸಿಕೊಂಡು ಬಂದರೆ ಆಗುವುದಿಲ್ಲ, ಸಮರ್ಪಕ ಮಾಹಿತಿ ತಗೆದುಕೊಂಡು ಬರಬೇಕು, ಮಾಹಿತಿ ಇಲ್ಲದೇ ಬರುತ್ತೀರಲ್ಲ ನಿಮಗೆ ನಾಚಿಕೆ ಆಗಬೇಕು ಎಂದು ಸೊರಬ ತಾಲೂಕಿನ ಲೆಕ್ಕ ಪರಿಶೋಧಕರಿಗೆ ತರಾಟೆ ತೆಗೆದುಕೊಂಡರು. ಬಹುತೇಕ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಕೇವಲ ನಾಮಕೇವಾಸ್ತೆ ಅಂಕಿ ಅಂಶಗಳನ್ನು ನೀಡುತ್ತಿದ್ದರು.
ಹಾಗಾಗಿ ಜಿಲ್ಲಾಧಿಕಾರಿಗಳು ಗರಂ ಆದರು, ಅಂತಹ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಘನತಾಜ್ಯ ವಿಲೇವಾರಿ, ಸ್ಮಶಾನ ಭೂಮಿ, ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ಯೋಜನೆ, ಸರ್ಕಾರಿ ಶಾಲೆಗಳು, ಹೀಗೆ ಪ್ರಮುಖ ಅಂಶಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಯಾವುದೇ ಯೋಜನೆಗಳು ತಡ ಮಾಡದೇ ತ್ವರಿತಗತಿಯಲ್ಲಿ ಸಮಸ್ಯೆ ಗಳನ್ನ ಬಗೆಹರಿಸಿ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದರು.