ಶಿವಮೊಗ್ಗ:ಮಾಸ್ಕ್ ಧರಿಸದೆ ರಸ್ತೆಯಲ್ಲಿ ನಡೆದುಬರುತ್ತಿದ್ದ ಪೊಲೀಸ್ ಒಬ್ಬರನ್ನು ಪಾಲಿಕೆ ಅಧಿಕಾರಿಗಳು ಪ್ರಶ್ನಿಸಿ ದಂಡ ಹಾಕಿದ್ದಾರೆ. ಈ ವೇಳೆ ತಪ್ಪಿತಸ್ಥ ಪೊಲೀಸಪ್ಪನೇ ದಂಡ ಹಾಕಿದ ಅಧಿಕಾರಿಗಳ ಮೇಲೆ ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಿವಮೊಗ್ಗ: ಮಾಸ್ಕ್ ಹಾಕದ ಪೊಲೀಸಪ್ಪನಿಗೆ ಬಿತ್ತು ದಂಡ!
ಮಾಸ್ಕ್ ಧರಿಸದೆ ರಸ್ತೆಯಲ್ಲಿ ನಡೆದುಬರುತ್ತಿದ್ದ ಪೊಲೀಸ್ ಒಬ್ಬರನ್ನು ಪಾಲಿಕೆ ಅಧಿಕಾರಿಗಳು ಪ್ರಶ್ನಿಸಿ ದಂಡ ಹಾಕಿದ್ದಾನೆ. ಈ ವೇಳೆ ತಪ್ಪಿತಸ್ಥ ಪೊಲೀಸಪ್ಪನೇ ಅವಾಜ್ ಹಾಕಿ ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸರ್ಕಾರ ಘೋಷಿಸಿದೆ. ಮಾಸ್ಕ್ ಹಾಕದೆ ಇರುವವರಿಗೆ ದಂಡ ಹಾಕುವ ಅಧಿಕಾರವನ್ನು ಪಾಲಿಕೆಯರಿಗೆ ನೀಡಿದ್ದು, ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಗಳು ದಂಡ ವಿಧಿಸುವುದರ ಮೂಲಕ ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಿದ್ದಾರೆ.
ಇಂದು ಪಾಲಿಕೆಯ ಅಧಿಕಾರಿಗಳು ನಗರದ ಗೋಪಿ ವೃತ್ತದಲ್ಲಿ ಮಾಸ್ಕ್ ಇಲ್ಲದೆ ಬೈಕ್ ನಲ್ಲಿ ಓಡಾಡುವವರಿಗೆ ದಂಡ ಹಾಕುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ಪೊಲೀಸೊಬ್ಬರನ್ನು ತಡೆದು ದಂಡ ವಿಧಿಸಿದ್ದಾರೆ. ಆಗ ಮಾಡಿದ ತಪ್ಪಿಗೆ ಸುಮ್ಮನಿರದ ಪೊಲೀಸ್ ನೀವು ನಮ್ಮ ಸ್ಟೇಷನ್ ಗೆ ಬನ್ರಿ ನೋಡ್ಕೋತಿನಿ ಅಂತಾ ಅವಾಜ್ ಬೇರೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಪೊಲೀಸ್ ಹಾಗೂ ಪಾಲಿಕೆಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೂ ಬಿಡದ ಪಾಲಿಕೆ ಸಿಬ್ಬಂದಿ ದಂಡ ಹಾಕಿ ತಮ್ಮ ಕರ್ತವ್ಯ ಪಾಲಿಸಿದ್ದಾರೆ.