ಶಿವಮೊಗ್ಗ:ಲಾಕ್ಡೌನ್ ಅವಲೋಕಿಸಲು ಸ್ವತಃ ಡಿಸಿ ಕೆ. ಬಿ. ಶಿವಕುಮಾರ್ ನಗರವನ್ನು ರೌಂಡ್ಸ್ ಹಾಕಿದ್ದಾರೆ.
ಶಿವಮೊಗ್ಗ: ವ್ಯಾಪಾರಿಗಳಿಗೆ, ರಸ್ತೆಗಿಳಿದ ವಾಹನ ಸವಾರರಿಗೆ ಲಾಕ್ಡೌನ್ ಪಾಲಿಸುವಂತೆ ತಿಳಿ ಹೇಳಿದ ಡಿಸಿ - Lockdown Effect
ಶಿವಮೊಗ್ಗ ಡಿಸಿ ಕೆ. ಬಿ. ಶಿವಕುಮಾರ್ ನಗರವನ್ನು ರೌಂಡ್ಸ್ ಹಾಕಿ ಜಿಲ್ಲೆಯಲ್ಲಿನ ವ್ಯವಸ್ಥೆ, ಅನುಸರಿಸುತ್ತಿರುವ ಕ್ರಮಗಳ ಅವಲೋಕನ ಮಾಡಿದರು. ಜೊತೆಗೆ ವ್ಯಾಪಾರಿಗಳಿಗೆ, ರಸ್ತೆಗಿಳಿದ ವಾಹನ ಸವಾರರಿಗೆ ಲಾಕ್ಡೌನ್ ಪಾಲಿಸುವಂತೆ ತಿಳಿ ಹೇಳಿದರು.
ಶಿವಮೊಗ್ಗದ ಆಲ್ಕೂಳ ವೃತ್ತದಲ್ಲಿ ವಾಹನಗಳ ತಪಾಸಣೆ ನಡೆಸಿದ ಅವರು ಆನಂತರ ಬೊಮ್ಮನಕಟ್ಟೆಯ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇರುವವರ ಆರೋಗ್ಯ ವಿಚಾರಿಸಿದರು. ಇದಕ್ಕೂ ಮುನ್ನ ಬೊಮ್ಮನಕಟ್ಟೆಯ ಬಳಿ ರೈಲ್ವೆ ಕ್ರಾಸಿಂಗ್ ಬಳಿ ಎಳನೀರು ವ್ಯಾಪಾರಿಗೆ ಗುಂಪು ಸೇರಿಸಿಕೊಂಡು ವ್ಯಾಪಾರ ಮಾಡದಂತೆ ತಿಳಿಸಿದರು. ಅದೇ ರೀತಿ ಗೋಪಾಳದ ಬಳಿ ತಾವೇ ಸ್ವತಃ ಬೈಕ್ ಹಾಗೂ ಕಾರು ಸವಾರರನ್ನು ತಡೆದು ಪರಿಶೀಲಿಸಿದರು.
ಆನಂತರ ಆಯನೂರಿಗೆ ತೆರಳಿದ ಜಿಲ್ಲಾಧಿಕಾರಿಗಳು, ಬೇಕರಿಯವರಿಗೆ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಕಾಯ್ದಿರಿಸಿ ವ್ಯಾಪಾರ ಮಾಡಲು ತಿಳಿಸಿದರು. ನಂತರ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಹಾಗೂ ಸಾಗರ ತಾಲೂಕಿನ ಆನಂದಪುರಂ ಗ್ರಾಮಗಳಿಗೆ ತೆರಳಿ ಗ್ರಾಮ ಪಂಚಾಯತ್ ಅಧಿಕಾರಿಗಳಿಂದ ಮಾಹಿತಿ ಪಡೆದರು.