ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಸಂಸ್ಕೃತ ಬಾಲ ಸಂಭ್ರಮ ಕಾರ್ಯಕ್ರಮ..

ಸಂಸ್ಕೃತ ಭಾಷೆ ದೇಶ ಹಾಗೂ ರಾಜ್ಯದ ಭಾಷೆಯಾಗಬೇಕು. ನಿಮ್ಮ ಮುಂದಿನ ಸಂಸ್ಕೃತ ಶಿಬಿರವನ್ನು ನಮ್ಮ ಪಂಚಮಸಾಲಿ ಪೀಠದಲ್ಲಿ ನಡೆಸಬೇಕು.‌ ಇದಕ್ಕೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ನಿಮ್ಮ ಜೊತೆ ನಾನು ಸಂಸ್ಕೃತ ಕಲಿಯುತ್ತೇನೆ ಎಂದು ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ಸಂಸ್ಕೃತ ಬಾಲ ಸಂಭ್ರಮ ಕಾರ್ಯಕ್ರಮ
Sanskrit Bala programme

By

Published : Jan 17, 2020, 9:02 PM IST

ಶಿವಮೊಗ್ಗ:ಶ್ರೀಗಂಧ ಸಂಸ್ಥೆ 25 ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗಾಗಿ ಸಂಸ್ಕೃತ ಬಾಲ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಂಸ್ಕೃತ ಬಾಲ ಸಂಭ್ರಮ ಕಾರ್ಯಕ್ರಮ..

ನಗರದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶ್ರೀಗಳು, ಈಶ್ವರಪ್ಪನವರು ಕಳೆದ 25 ವರ್ಷಗಳ ಹಿಂದೆ ಕೃಷ್ಣಕೈ ಶ್ರೀ ವಿಶ್ವೇಶ್ವರ ತೀರ್ಥರ ಗೌರವಾಧ್ಯಕ್ಷತೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

ಸಂಸ್ಕೃತ ಭಾಷೆ ದೇಶ ಹಾಗೂ ರಾಜ್ಯದ ಭಾಷೆಯಾಗಬೇಕು. ನಿಮ್ಮ ಮುಂದಿನ ಸಂಸ್ಕೃತ ಶಿಬಿರವನ್ನು ನಮ್ಮ ಪಂಚಮಸಾಲಿ ಪೀಠದಲ್ಲಿ ನಡೆಸಬೇಕು.‌ ಇದಕ್ಕೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ನಿಮ್ಮ ಜೊತೆ ನಾನು ಸಂಸ್ಕೃತ ಕಲಿಯುತ್ತೇನೆ ಎಂದರು.

ಬಳಿಕ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿ, ಸಂಸ್ಕೃತ ಕಲಿತವರು ಸುಂಸ್ಕೃತರಾಗುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಸ್ಕೃತ ಕಲಿಯಬೇಕು. ಈ ಮೂಲಕ ವೇದಿಕೆ ಮೇಲೆ ಇರುವ ಗುರುಗಳ ಆರ್ಶೀವಾದ ನಿಮಗೆ ಸಿಗಲಿದೆ. ಎಲ್ಲರೂ ಸುಖವಾಗಿರಬೇಕು. ಎಲ್ಲಾ ದೇವರಿಗೂ ನಮಸ್ಕಾರ ಮಾಡಬೇಕು ಎಂದು ಸಂಸ್ಕೃತ ಭಾಷೆ ಹೇಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತಿಯ ರಾಷ್ಟ್ರೀಯ ಸಂಘಟನಾ ಮಂತ್ರಿ ದಿನೇಶ್ ಕಾಮತ್, ವಾಸವಿ ಸಂಸ್ಕೃತ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಎಸ್‌ ಕೆ ಶೇಷಾಚಲ, ಶ್ರೀಗಂಧ ಸಂಸ್ಥೆಯ ಸಂಚಾಲಕರಾದ ಬಾ ರ ಮಧುಸೂಧನ್ ಸೇರಿ ಐದು ಸಾವಿರ ಶಾಲಾ ‌ಮಕ್ಕಳು ಭಾಗಿಯಾಗಿದ್ದರು.

ABOUT THE AUTHOR

...view details