ಶಿವಮೊಗ್ಗ: ಮಹಿಳೆಯೊಬ್ಬರ ಹೊಟ್ಟೆಯೊಳಗೆ ಇದ್ದ 7 ಕೆ.ಜಿ ಗೆಡ್ಡೆಯನ್ನು ಸಾಗರದ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಸಾಗರದ ಬಿ.ಹೆಚ್.ರಸ್ತೆಯಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸಾಗರದ ಸೌಮ್ಯ ಡಿಸೋಜಾ(36) ಅವರು ಹೊಟ್ಟೆ ನೋವೆಂದು ಕಳೆದ ಒಂದು ವಾರದ ಹಿಂದೆ ಆಗಮಿಸಿದ್ದರು.
ಸಾಗರ: ಮಹಿಳೆ ಹೊಟ್ಟೆಯಲ್ಲಿದ್ದ 7 ಕೆಜಿ ಗೆಡ್ಡೆ ಹೊರ ತೆಗೆದ ವೈದ್ಯರು
ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 7 ಕೆ.ಜಿ ತೂಕದ ಗೆಡ್ಡೆಯನ್ನು ಡಾ.ನಾಗೇಂದ್ರಪ್ಪ ಅವರ ನೇತೃತ್ವದ ವೈದ್ಯರ ತಂಡ ಆಪರೇಷನ್ ನಡೆಸಿ ಹೊರ ತೆಗೆದಿದ್ದಾರೆ.
ಸೌಮ್ಯ ಡಿಸೋಜಾ ಅವರನ್ನು ತಪಾಸಣೆ ನಡೆಸಿದ ಡಾ.ನಾಗೇಂದ್ರಪ್ಪ ನೇತೃತ್ವದ ವೈದ್ಯರ ತಂಡ ಸ್ಕ್ಯಾನ್ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ತಿಳಿದು ಬಂದಿತ್ತು. ಸೌಮ್ಯ ಅವರ ಆರೋಗ್ಯ ದೃಢವಾಗಿದ್ದ ಕಾರಣ ಇಂದು ಆಪರೇಷನ್ ನಡೆಸಲಾಗಿದ್ದು, ಅವರ ಹೊಟ್ಟೆಯಿಂದ 7 ಕೆ.ಜಿ ತೂಕದ ಗೆಡ್ಡೆಯನ್ನು ಹೊರ ತೆಗೆದಿದ್ದಾರೆ.
ಸದ್ಯ ಮಹಿಳೆಯು ಆರೋಗ್ಯವಾಗಿದ್ದಾರೆ. ಆಪರೇಷನ್ ಅನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ.ನಾಗೇಂದ್ರಪ್ಪ, ಡಾ.ಸುಚಿತ್ರ, ಅರವಳಿಕೆ ತಜ್ಞೆ ಡಾ. ಸುಷ್ಮಾ, ಅವರು ಮಾಡಿದ್ದಾರೆ. ಈ ವೇಳೆ ನರ್ಸ್ಗಳಾದ ನಾಗರತ್ನ, ಸುವರ್ಣ ಹಾಗೂ ಡಿ ಗ್ರೂಪ್ ನೌಕರರಾದ ಚಂದ್ರು ಹಾಗೂ ಅರ್ಜುನ್ ಹಾಜರಿದ್ದರು.