ಶಿವಮೊಗ್ಗ: ನಗರದಲ್ಲಿ ನಿನ್ನೆ ಉಂಟಾದ ಹಿಜಾಬ್- ಕೇಸರಿ ಶಾಲು ವಿವಾದ- ಪ್ರಕ್ಷುಬ್ದ ಪರಿಸ್ಥಿತಿಯಿಂದಾಗಿ ಇಂದು ನಗರದಲ್ಲಿ ಪೊಲೀಸ್ ಇಲಾಖೆ ಪಥಸಂಚಲನ ನಡೆಸಿದೆ.
ನಗರದ ಸೈನ್ಸ್ ಮೈದಾನದಿಂದ ಪ್ರಾರಂಭವಾದ ಪಥಸಂಚಲನ ಕರ್ನಾಟಕ ಸಂಘ, ಎಎ ಸರ್ಕಲ್, ಬಿ. ಹೆಚ್ ರಸ್ತೆ, ಅಶೋಕ ಸರ್ಕಲ್ ಮೂಲಕ ಡಿಎಆರ್ ಮೈದಾನ ತಲುಪಲಾಯಿತು. ಪಥಸಚಲನದಲ್ಲಿ ಭಾಗಿಯಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು, ಶಿವಮೊಗ್ಗದಲ್ಲಿ ಯಾವುದೇ ಆತಂಕವಿಲ್ಲದೇ ದಿನಚರಿ ನಡೆಯುತ್ತಿದೆ. ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ನಡೆಸಬಹುದು. ವರ್ತಕರು ವ್ಯಾಪಾರ ನಡೆಸಬಹುದು ಎಂದರು.
ಯುವಕರು ಗುಂಪು ಗೂಡುವುದನ್ನು ತಡೆಯಲಾಗಿದೆ. ಯುವಕರು ಹೆಚ್ಚಾಗಿ ಸೇರುವ ಬೀಡ ಅಂಗಡಿ, ಟೀ ಶಾಪ್ ಗಳನ್ನು ಮುಚ್ಚಿಸಲಾಗಿದೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. 150 ಜನ ಸಿಬ್ಭಂದಿ, 4 ಜನ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.