ಶಿವಮೊಗ್ಗ:ಇದೇ ಮೊದಲ ಬಾರಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಯುವಸಬಲೀಕರಣ ಮತ್ತು ಕ್ರೀಡೆ ಹೀಗೆ ಅನೇಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಚೊಚ್ಚಲ ಬಾರಿಗೆ ವಾಯುಸೇನಾ ನೇಮಕಾತಿ ರ‍್ಯಾಲಿಯನ್ನು ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ರ‍್ಯಾಲಿಯಲ್ಲಿ ಮೊದಲನೇ ದಿನ ಉತ್ತರ ಕರ್ನಾಟಕ ಭಾಗದ ಒಂಬತ್ತು ಜಿಲ್ಲೆಯ ಐದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಈ ವಾಯುಸೇನೆ ನೇಮಕಾತಿ ಪ್ರಕ್ರಿಯೆ ಆರ್ಮಿಗಿಂತ ಭಿನ್ನವಾಗಿದೆ. ನೆಹರು ಕ್ರೀಡಾಂಗಣದ ಹಾಕಿ ಅಂಕಣದಲ್ಲಿ ಮೊದಲನೇಯ ಕೌಂಟರ್ನಲ್ಲಿ ನೋಂದಣಿ ಮತ್ತು ನಂತರದಲ್ಲಿ ದಾಖಲೆ ಪರಿಶೀಲನೆ ಮಾಡಲಾಯಿತು. ಎಲ್ಲಾ ದಾಖಲೆಗಳು ಸರಿ ಇದ್ದವರಿಗೆ ಚೆಸ್ಟ್ ನಂಬರ್ ನೀಡಿ, ದೈಹಿಕ ಪರೀಕ್ಷೆ ನೀಡಲಾಯಿತು.
ನಂತರ ಇದರಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸ್ಟೇಡಿಯಂನ ಒಳಗೆ ಪುಶ್ ಆಪ್ಸ್, ಸಿಟ್ ಆಪ್ಸ್, ಸ್ಕ್ವಾಟ್ಸ್, ಹೈಟ್ ಪರೀಕ್ಷೆಯನ್ನ ಮಾಡಲಾಯಿತು.ಇವೆಲ್ಲದರಲ್ಲಿ ಪಾಸ್ ಆದವರಿಗೆ ಇಂಡೋರ್ ಸ್ಟೇಡಿಯಂನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.ಹೀಗೆ ಎಲ್ಲಾ ಹಂತದಲ್ಲಿ ಪಾಸ್ ಆದ ಅಭ್ಯರ್ಥಿಗಳನ್ನು ಬೆಂಗಳೂರಿಗೆ ದೈಹಿಕ ಪರಿಕ್ಷೇಗೆ ಕಳುಹಿಸಿ ಕೊಡಲಾಗುತ್ತದೆ. ಎಲ್ಲ ಹಂತಗಳನ್ನ ಪಾಸ್ ಮಾಡಿದ ಅಭ್ಯರ್ಥಿಗಳನ್ನು ವಾಯು ಸೇನೆಗೆ ಸೇರ್ಪಡೆ ಮಾಡಲಾಗುತ್ತದೆ.