ಕರ್ನಾಟಕ

karnataka

ETV Bharat / state

ಮಾಸ್ಕ್​ ವಿಚಾರ: ಶಿವಮೊಗ್ಗ ಡಿಸಿ ಕಚೇರಿಯಲ್ಲೇ ಎರಡು ಗುಂಪುಗಳ ಮಧ್ಯೆ ಗಲಾಟೆ - ಡಿಸಿ ಆಫೀಸಲ್ಲೇ ಗಲಾಟೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ಗುಂಪುಗಳ ಮಧ್ಯೆ ಮಾಸ್ಕ್ ಹಾಕಿಕೊಳ್ಳುವ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಅದ್ರೆ ಮಹಿಳೆ ಮಾಸ್ಕ್​ ಧರಿಸಲ್ಲ ಎಂಬ ಉದ್ಧಟತನ ತೋರಿರುವುದು ಗಲಾಟೆಗೆ ಕಾರಣವಾಗಿದೆ.

DC office of Shimoga
ಡಿಸಿ ಆಫೀಸ್

By

Published : Jun 16, 2020, 1:30 PM IST

ಶಿವಮೊಗ್ಗ: ಮಾಸ್ಕ್ ಧರಿಸದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ.

ಮಾಸ್ಕ್​ ಧರಿಸದ ವಿಚಾರಕ್ಕೆ ಡಿಸಿ ಕಚೇರಿಯಲ್ಲೇ ಎರಡು ಗುಂಪುಗಳ ನಡುವೆ ಗಲಾಟೆ

ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಮಾತ್ರ ಬುದ್ಧಿ ಕಲುಯುತ್ತಿಲ್ಲ ಎಂಬಂತೆ ಕಾಣುತ್ತದೆ. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ಗುಂಪುಗಳ ಮಧ್ಯೆ ಮಾಸ್ಕ್ ಹಾಕಿಕೊಳ್ಳುವ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಸಾರ್ವಜನಿಕರು ಮಹಿಳೆಗೆ ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಆ ಮಹಿಳೆ ನಾನು ಎಂದೂ ಮಾಸ್ಕ್ ಧರಿಸಲ್ಲ ಎಂಬ ಉದ್ಧಟತನ ತೋರಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ನೀಡಲು ಬಂದಿದ್ದವರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ಮಹಿಳೆಯ ಪರವಾಗಿ ಇನ್ನೊಬ್ಬರು ಬಂದು ಗಲಾಟೆ ಮಾಡಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಕೆಲಸಗಳಿಗೆ ಬಂದಿದ್ದ ಎರಡು ಗುಂಪುಗಳ ಮಧ್ಯೆ ಮಾಸ್ಕ್ ಹಾಕಿಕೊಳ್ಳವ ವಿಚಾರಕ್ಕೆ ಈ ಗಲಾಟೆ ನಡೆದಿದೆ.

ABOUT THE AUTHOR

...view details